ಆಡಿಸಿದಳೆಶೋದೆ…

ಆಡಿಸಿದಳೆಶೋದೆ.. ಎಷ್ಟೊಂದು ಬಗೆಯಲ್ಲಿ… ಪುರಂದರ ದಾಸರ ಪದ, ವಿಧ ವಿಧವಾಗಿ, ತಲೆದೂಗುವಂತೆ, ಕೈ ಮುಗಿಯುವಂತೆ, ಮತ್ತೆ ಮತ್ತೆ ಕೇಳಿ ಖುಷಿ ಪಡುವಂತೆ, ದಿಗ್ಗಜರ ಕಂಠದಲ್ಲಿ.

ಎಮ್ ಎಸ್ ಸುಬ್ಬುಲಕ್ಷ್ಮಿ ವಿಶ್ವಸಂಸ್ಥೆಯಲ್ಲಿ ಹಾಡಿದ್ದು…

ಕೆ.ವಿ.ನಾರಾಯಣ ಸ್ವಾಮಿ ಅವರು ಹಾಡಿದ್ದು (ಯೂ ಟ್ಯೂಬಿನ ಈ ಲಿಂಕಿನಲ್ಲಿ ಒಂದಷ್ಟು ಸ್ವಾರಸ್ಯಕರವಾದ ಮಾತು ಕತೆ ಇದೆ, ಕನ್ನಡ ಹಾಡುಗಳನ್ನು ಹಾಡುವಾಗ ಶಬ್ದಗಳನ್ನು ಬಿಡಿಸುವ ಕುರಿತು)

ಕಾಪಿ ರಾಗದಲ್ಲಿ ಈ ಹಾಡನ್ನು ಮೊದಲು ರೆಕಾರ್ಡ್ ಮಾಡಿದ್ದು (first known recording) ಮೈಸೂರಿನ ಬಿ ಎಸ್ ರಾಜಯ್ಯಂಗಾರ್ ಅವರಂತೆ. ಯೂ ಟ್ಯೂಬಿನ ಕೃಪೆ, ಅವರ ಧ್ವನಿ ಇಲ್ಲಿದೆ.

ಮತ್ತೊಮ್ಮೆ ಎಮ್.ಎಸ್. ವಿಶ್ವ ಸಂಸ್ಥೆಯಲ್ಲಿ ಹಾಡಿ ಕೆಲವು ವರ್ಷಗಳಾದ ನಂತರದ್ದಿರಬೇಕು ಇದು, ಅದಕ್ಕಿಂತ ಹೆಚ್ಚು ಇಷ್ಟವಾಯಿತು. ’ಪುರಂದರ ವಿಠಲನ’ ಎಂಬಲ್ಲಿ ಸಹಜವಾಗಿ ಕೈ ಮುಗಿದದ್ದು ಹಾಗೇ ಆಡಿಸಿದಳೆ ಯಶೋದೆ ಎಂದು ಬಿಡಿಸಿ ಹಾಡಿನಲ್ಲಿನ ಬೆರಗನ್ನು ತೆರೆದಿಟ್ಟದ್ದು ಇಷ್ಟವಾಯಿತು.

ನನ್ನ ಹತ್ತಿರ ಇದ್ದ ಸಿ.ಡಿ.ಯಲ್ಲಿ ಇದೇ ಹಾಡನ್ನು ಅಣ್ಣಾವ್ರು ಹಾಡಿದ್ದಿದೆ. ಅದು ಬಹಳ ಚನ್ನಾಗಿದೆ. ಯಾಕೋ ಅದಕ್ಕೆ ಎಲ್ಲೂ ಲಿಂಕ್ ಸಿಗಲಿಲ್ಲ.

ವೀಣಾ ಎಸ್ ಬಾಲಚಂದರ್ ಅವರ ವೀಣೆಯಲ್ಲಿ ಇದೇ ಹಾಡು ಇಲ್ಲಿದೆ,

(ಬಹಳ ದಿವಸಗಳಿಂದ ಇಲ್ಲಿ ಏನನ್ನೂ ಪೋಸ್ಟ್ ಮಾಡಿರಲಿಲ್ಲ. ಬಹಳ ದಿನಗಳಿಂದ ಡ್ರಾಫ್ಟ್ ಸ್ಥಿತಿಯಲ್ಲಿದ್ದದ್ದರ ಸುತ್ತ ಒಂದೆಷ್ಟು ಬರೆದು ಪೋಸ್ಟ್ ಮಾಡಬೇಕು ಅಂತ ಬಿಟ್ಟಿದ್ದೆ. ಬರೆಯಬೇಕು ಅಂತ ಆಗ ಅನಿಸಿದ್ದು ಏನೋ ಮರೆತು ಹೋಗಿದೆ. ಇವತ್ತು ಕೆಲವಾರು ಸಾಲುಗಳೊಡನೆ ಪೋಸ್ಟ್ ಮಾಡಿದೆ)

Advertisements