ಕೇಳುವದರೊಳಗೆ ಕಳೆದೆಯಲ್ಲ ದಿನ …

ರಾಯಚೂರು ಶೇಷಗಿರಿ ದಾಸ್ ಹಾಡುಗಾರಿಕೆಯಲ್ಲಿ ಕೇಳಿದ ಗೋವಿಂದ ದಾಸರ ಪದ.

ಕೇಳುವದರೊಳಗೆ ಕಳೆದೆಯಲ್ಲ ದಿನ
ಮಾಡುವದೆಂದು ಹೇಳಲೆ ಮನವೆ

ಮನನ ಮಾಡಿ ಮಾಧವನ ಮಹಿಮೆಯ
ಅನುಭವಕೆ ತಾರದೆ ಈ ಪರಿಯಲ್ಲಿ ನೀ ಬರಿ …

ಪರರ ಹರಟೆಗೆ ಪರವಶನಾಗುತ
ನಿರುತ ಈ ಪರಿ ಕಾಲ ಕಳೆವೆ ಮರಳಿ
ಹರಿ ಸ್ಮರಿಸಿರೆಂದು ಡಂಗುರ ಹೊಯ್ಯುವ
ಗುರು ಹಿರಿಯರ ನುಡಿಗಳನೆ …

ಹೆಣ್ಣು ಮಣ್ಣು ಹಣವನ್ನು ನಂ-
ಬಿ ನೀ ಕೆಡದಿರೆಲೊ ಎಂದೆನುತ
ಚನ್ನಾಗಿ ಸರ್ವತ್ರ ಕೇಳಿ ನೀ
ಮುನ್ನಿನಂತೆ ಆಚರಿಸುತ್ತಿರುವೆಯಾ

ಜ್ಞಾನವಿಟ್ಟು ಪವಮಾನ ವಂದಿತನ
ಗಾನ ಮಾಡು ಶ್ರೀ ಹರಿ ಗುಣವ
ಮನದ ಸಿರಿ ಗೋವಿಂದ ವಿಠ್ಠಲಗೆ
ಹೀನ ಲೇಸುಗಳ ಅರ್ಪಿಸು ಮರೆಯದೆ

Advertisements