ನಕ್ಷತ್ರ ಭೂಷಣ …

ಮೊನ್ನೆ ನನ್ನಪ್ಪ ಈ ಶಿವಸ್ತುತಿಯನ್ನ ಟೈಪ್ ಮಾಡಿ ಕಳಿಸಿದ್ರು. ಕಾಖಂಡಕಿ ಕೃಷ್ಣದಾಸರು ಈ ಕೃತಿಯಲ್ಲಿ ನಕ್ಷತ್ರಗಳ ಹೆಸರುಗಳನ್ನ ಬಳಸಿಕೊಂಡು ಶಿವನನ್ನ ಸ್ತುತಿಸುತ್ತಾರೆ. ನಕ್ಷತ್ರಗಳ ಹೆಸರನ್ನ ಸೂಚ್ಯವಾಗಿ ತಿಳಿಸುತ್ತಾರಷ್ಟೆ ಹೊರತು ನೇರವಾಗಿ ಹೆಸರನ್ನೇ ಹೇಳಿಬಿಡುವದಿಲ್ಲ.

ನಕ್ಷತ್ರ ರಮಣನಯ್ಯನಿಗೊಲಿದು ಶರವನಿತ್ತೆ
ನಕ್ಷತ್ರದೊಲ್ಲಭನ ತಮ್ಮನ ಸುತನ ಸುಟ್ಟೆ
ನಕ್ಷತ್ರ ಇಲ್ಲದವನ ವೈರಿಗಮನನ ತಾತ
ನಕ್ಷತ್ರ ಕಾಂತ ಧರನೆ||
ನಕ್ಷತ್ರಜಾತನಗ್ರಜನ ಮಸ್ತಕವ ತರಿದೆ
ನಕ್ಷತ್ರ ಸಹಸ್ರ ಉಳ್ಳವನ ದ್ವಾರವನ್ನು ಕಾಯ್ದೆ
ನಕ್ಷತ್ರ ನೀನೇ ಇಂದ್ರಾದಿ ದೇವತೆಗಳಿಗೆ ಗುರುಮಹಿಪತಿಸ್ವಾಮಿ
ನಕ್ಷತ್ರ ಭೂಷಣ ಸಲಹೂ||

ನನ್ನಪ್ಪ ಇದರಲ್ಲಿನ ನಕ್ಷತ್ರಗಳ ಹೆಸರನ್ನು ಇಲ್ಲಿ ಉಲ್ಲೇಖಿಸಿರುವ  ಕ್ರಮದಲ್ಲೇ ಬರೆದು ಕಳಿಸಿದ್ರು.  ಆದರೆ ನಾನೀಗ ಕ್ರಮ ತಪ್ಪಿಸಿ ಕೊಡ್ತಾ ಇದ್ದೇನೆ, ನೋಡಿ ನಿಮಗೆ ಯಾವದು ಯಾವ ಸಾಲಿಗೆ ಅಂತ ಗೊತ್ತಾಗುತ್ತಾ ಅಂತ :).

ಚಂದ್ರ, ಉತ್ತರ, ಆಶ್ಲೇಷ, ರೋಹಿಣಿ, ಜೇಷ್ಠ, ಶ್ರವಣ, ಚಿತ್ತ, ಹಸ್ತಾ

ಕೊ.: ನಕ್ಷತ್ರಗಳ ಸಾಲಿನಲ್ಲಿ ಚಂದ್ರ ಯಾಕೆ ಬಂದ ಅಂತಿರ? ‘ನಕ್ಷತ್ರಾಣಾಮ ಶಶಿ’ ಅಂತಾನೆ ಕೃಷ್ಣ  ಗೀತೆಯಲ್ಲಿ. ಚಂದ್ರ ನಕ್ಷತ್ರಗಳಿಗೆ ಒಡೆಯನಂತೆ.

Advertisements