ಬೆಂಕಿಗೆ ಗಾಳಿ ಹಾಕಬಾರದಂತೆ!

ಇವರು ಮಹಾನ್ ಪ್ರಭೃತಿಗಳು ಗಾಳಿಗೇ ಬೆಂಕಿ ಕೊಟ್ಟವರು! ನುಸುಳಿದ ಗಾಳಿಯು ರಭಸದಲುಕ್ಕುತ ಹಸಿರಿನ ತೋಪಿನ ಗಿಡಮರ ಉರುಳಿಸಿ ಹೊಸಕುತ ಹೂಗಳ ಹಾರಿಸೆ ಪಣ್ಗಳ ಬೀಸುತ ಬಂದರು ಬಗೆಬಗೆ ಆಯುಧ ಹಿಡಿಯಿರಿ ಬಿಡದಿರಿ ಹೊಡೆಯಿರಿ ಕಟ್ಟಿರಿ ಒಡೆಯನ ತೋಟವ ಕೆಡಹುವ ತೊಂಡನ ಹುಡುಕಿರಿ ಬೇಗನೆ ಅಲ್ಲಿಹ ನೋಡಿರಿ ಗಿಡದಲಿ ಸುಳಿದಿಹ ಗಾಳಿಯ ಗುದ್ದಿರಿ ಅಂತೂ ಇಂತೂ ಹೇಗೋ ಎಂತೋ ಮೂರನೆ ಒಂದರ ಬೆಲೆಯನೆ ತೆತ್ತೋ ಇವರೇ ಹಿಡಿದರೊ ತಾನೇ ಸಿಕ್ತೋ ಮುಟ್ಟಿಲಿ ಕಟ್ಟಿದೆವೆನ್ನುತ ಕುಣಿದರು ಮಾಡಿದ ತಪ್ಪಿಗೆ ತಕ್ಕನೆ … ಓದನ್ನು ಮುಂದುವರೆಸಿ

Rate this:

ಬೃಂದಾವನಕೆ ಹಾಲನು ಮಾರಲು…

ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ… ಅರೆ, ಬೃಂದಾವನದಲ್ಲಿ ಇದ್ದದ್ದೇ ಗೋವಳರಲ್ಲವೆ? ಅಲ್ಲಿಗೇ ಹಾಲು ಮಾರಲಿಕ್ಕೆ ಹೋಗೋದಾ? ಎಷ್ಟು ಸರ್ತಿ ಗುನುಗಿದ್ದೀನಿ ಈ ಹಾಡನ್ನ ಆದರೆ ಹೊಳದೇ ಇರಲಿಲ್ಲ! ಮುಂದಿನ ಸಾಲು ನೆನಪಿಲ್ಲ, ನೋಡೋಣ ಕವಿತೆಯಲ್ಲಿ ಮುಂದೆ ಏನು ಹೇಳ್ತಾರೆ ಅಂತ ಯೂಟ್ಯೂಬಿನಲ್ಲಿ ಹಾಡು ಹುಡುಕಿ ಹಾಕಿದೆ… ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ ಬೃಂದಾವನದಿ ಹಾಲನು ಕೊಳ್ಳುವರಾರಿಹರೆ ಹೇಳಿಂದುಮುಖಿ ಅರೆ, ಕವಿ ಕೂಡ ಅದನ್ನೇ ಕೇಳ್ತಾ ಇದ್ದಾರೆ.. ಯಾರು ಕೊಳ್ತಾರೆ … ಓದನ್ನು ಮುಂದುವರೆಸಿ

Rate this:

ಒಬ್ಬನೇ ಮನುಷ್ಯ!

‘ಹೋಗಿ ಆ ಸಾರ್ವಜನಿಕ ಸ್ನಾನಗೃಹದಲ್ಲಿ ಎಷ್ಟು ಮಂದಿ ಇದ್ದಾರೆ ಎಂದು ನೋಡಿಕೊಂಡು ಬಾ.’ ಅಂತ ಸಿರಿವಂತನೊಬ್ಬ ತನ್ನ ಸೇವಕನಿಗೆ ಹೇಳುತ್ತಾನೆ. ಬಹುಷಃ ಈಸೋಪನ ಕತೆಗಳಲ್ಲಿ ಓದಿದ್ದಿರಬೇಕು ಈ ಕತೆಯನ್ನ. ಆ ಸೇವಕನೋ ಲಗುಬಗೆಯಿಂದ ಓಡಿ ಹೋಗಿ ಬರುತ್ತಾನೆ. ಬಂದವನೇ ಹೇಳುತ್ತಾನೆ, ‘ಸ್ವಾಮಿ ಅಲ್ಲಿರುವದು ಒಬ್ಬನೇ ಮನುಷ್ಯ!’ ಈ ಸ್ವಾಮಿಗೀಗ ಬಲು ಖುಷಿ. ನೆಮ್ಮದಿಯಿಂದ ಸ್ನಾನ ಮಾಡಬಹುದೆಂದು ತಡ ಮಾಡದೆ ಅಲ್ಲಿಗೆ ಹೋದರೆ ಅಲ್ಲಿ ಕಂಡದ್ದೇನು? ಸ್ನಾನಗೃಹ ಜನರಿಂದ ಗಿಜಿಗುಟ್ಟುತ್ತಿದೆ! ತನ್ನ ಜೊತೆಯಲ್ಲೇ ಬಂದ ಸೇವಕನನ್ನು ಜಬರಿಸಿದಾಗ ಅವನು ಹೇಳಿದ್ದೇನು? ‘ಸ್ವಾಮಿ, … ಓದನ್ನು ಮುಂದುವರೆಸಿ

Rate this:

ಜಯ ಜಯ ವಿಜಯೀ ರಘುರಾಮ

ನೃತ್ಯ ನಾಟಕ ಜಯ ಜಯ ವಿಜಯೀ ರಘುರಾಮದಲ್ಲಿ  ‘ಹರನ ಬಿಲ್ಲನ್ನು ಪರಕಿಸುವೆ..’ ಎಂದು ಹೇಳುತ್ತ ರಾಮನು ಶಿವ ಧನುವನ್ನು ಎತ್ತಿ ಮುರಿಯುವ ದೃಶ್ಯವನ್ನು ನೋಡುತ್ತಿರುವಾಗ ಅನಿಸಿದ್ದು.. “ಕಾದವರ ಕತೆಯಿದು, ರಾಮಾಯಣವು ಸಿರಿ ರಾಮಚಂದ್ರನಿಗಾಗಿ ಕಾದವರ ಕತೆಯಿದು. ತಾಯಿ ಕೌಸಲ್ಯೆ, ತಂದೆ ದಶರಥ, ಸುಮಿತ್ರೆ ಕೈಕೇಯಿಯರು, ವಿಶ್ವಾಮಿತ್ರ, ಮಿಥಿಲೆಯಲ್ಲಿ ಮೈಥಿಲಿ, ಪರಶುರಾಮ, ಮಂಥರೆಯೂ ಬಹುಶಃ, ಅಯೋಧ್ಯೆಯ ಜನರು, ಗಂಗೆಯ ತಡಿಯಲ್ಲಿ ಗುಹ, ಕಾಡಿನ ಋಷಿ ಮುನಿಗಳು, ಮಿಸುನಿ ಜಿಂಕೆ ಮಾರೀಚ, ಕಳ್ಳ ರಾವಣನೆದುರಿಸಿದ ಜಟಾಯು, ಶಬರಿ, ಋಷ್ಯಮೂಕದಲಿ ಹನುಮಂತ, ಸಂಪಾತಿ, ಅಶೋಕವನದಲ್ಲಿ ಸೀತೆ, ಎಲ್ಲರೂ … ಓದನ್ನು ಮುಂದುವರೆಸಿ

Rate this:

ಕಲತ್ರವಸ್ತ್ರಕೃತಾಲಯಂ…

ಸಮುದ್ರ ಮಥನದಲ್ಲಿ ಹುಟ್ಟಿದ ಲಕ್ಷ್ಮಿ ನಾರಾಯಣನನ್ನು ವರಿಸಿದ ಮೇಲೆ ಸಮುದ್ರ ರಾಜನ ಪ್ಲ್ಯಾನ್ ಹೀಗಿತ್ತಂತೆ.. ಉನ್ನತ ನವರತ್ನಮಯವಾದ ಅರಮನೆಯ ಚೆನ್ನೇಮಗಳಿಂದ ವಿರಚಿಸಿ ತನ್ನ ಅಳಿಯನಿಗೆ ಸ್ಥಿರವಾಗಿ ಮಾಡಿಕೊಟ್ಟ ಇನ್ನೊಂದು ಕಡೆಯಡಿ ಇಡದಂತೆ || – ಶ್ರೀ ವಾದಿರಾಜರ ಲಕ್ಷ್ಮೀ ಶೋಭನ ಸಮುದ್ರದಲ್ಲೇ ಮನೆ ಮಾಡಿಕೊಂಡು ಇದ್ದ ಮೇಲೆ ನೋಡಿ ಏನಾಯ್ತಂತೆ.. ಪುರಾಪ್ಯಜೇಯೋ ಮುರಜಿತ್ಕಿಲಾತ್ರ ಪುರೀಂ ವಿಧಾಯಾಭವದತ್ಯಜೇಯಃ ಮಮೇತ್ಥಮಾಭಾತಿ ಕಲತ್ರವಸ್ತ್ರಕೃತಾ- ಲಯಂ ಕಃ ಖಲು ಜೇತುಕಾಮಃ – ಶ್ರೀ ವಾದಿರಾಜರ ರುಕ್ಮಿಣೀಶ ವಿಜಯ ಅಧ್ಯಾಯ ೧೬, ನುಡಿ ೫೯ (ಮೊದಲೇ … ಓದನ್ನು ಮುಂದುವರೆಸಿ

Rate this: