ಅದು ಯದಕ ನಿಂದರತದ?

ಅಪ್ಪ, ವಿರಜಾ ಅಕ್ಕಾ ಯಾವ ಸ್ಕೂಲಿಗೆ ಹೋಗ್ತಾಳ?

ಜೆ ಎಸ್ ಎಸ್ ಪಬ್ಲಿಕ್ ಸ್ಕೂಲ್ 

ಜೆ ಎಸ್ ಎಸ್ ಪಬ್ಲಿಕ್ ಸ್ಕೂಲಾ?

ಹೌದು…

ಅದು ಯದಕ ನಿಂದರತದ?

ಯದಕ ನಿಂದರತದ? ಏನ್ ಹಂಗಂದ್ರ?

What does it stand for?

ನನಗೂ ಮತ್ತ ನನ್ನ ನಾಲ್ಕೂ ಮುಕ್ಕಾಲು ವರ್ಷದ ಮಗಗೂ ನಡದ ಈ ಮಾತುಕತಿ ಹಳೇದೊಂದು ಸಂದರ್ಭ ನೆನಪು ಮಾಡಿತು.  ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ ಮೇಲಿನ ಮಾತದು. ‘ನಮಗ ಇಂಗ್ಲೀಷು ಅರ್ಥ ಆಗೋದು ಕನ್ನಡದ ಮೂಲಕನೆ. ಇಂಗ್ಲೀಷಿನಲ್ಲಿ ಓದಿದ್ದನ್ನ ಕನ್ನಡಕ್ಕೆ translate ಮಾಡಿಕೊಂಡೇ ಅರ್ಥ ಮಾಡ್ಕೋತೀವಿ’ ಅಂತ ಯಾರೋ ಹೇಳಿದ್ದನ್ನ ಕೇಳಿದೆನೋ ಅಥವಾ ಎಲ್ಲೋ ಓದಿದೆನೋ ಒಟ್ಟಿಗೆ ಅದು ತಲ್ಯಾಗ ಇಳದುಬಿಟ್ತು. ಮುಂದ ಒಂದು ಸ್ವಲ್ಪ ದಿವಸ  ಇಂಗ್ಲೀಷಿನಾಗ ಏನು ಓದಿದ್ರು ಅದನ್ನ ಕನ್ನಡಕ್ಕ ತರ್ಜುಮೆ ಮಾಡಿಕೋತ ಕೂತಗೊತಿದ್ದ ಮನಸ್ಸಿನ ಅಭ್ಯಾಸ ತಪ್ಪಸಲಿಕ್ಕಿಷ್ಟು   ಕಷ್ಟ ಪಡಬೇಕಾತು.

ಒಂದು ಹೊಸಾ ಭಾಷೆ ಕಲಿಯೋ ಕಾಲಕ್ಕ ಆ ಭಾಷೆಯ ಶಬ್ದಗಳು, ವಾಕ್ಯಗಳು ಇನ್ನೂ ಅಪರಿಚಿತವಿದ್ದಾಗ ಮೊದಲೇ ಗೊತ್ತಿರೋ ತಾಯ್ನುಡಿಯ  ಮೂಲಕ ಹೊಸ ಭಾಷೆ ಪರಿಚಯ ಮಾಡಿಕೊಳ್ತೀವಿ ಅನ್ನೋದು ಖರೆ ಅದ. ಆದರ ಎಲ್ಲಾ ಕಾಲಕ್ಕೂ ಆ ಹೊಸಾ ಭಾಷೆ ನಮಗೆ ಗೊತ್ತಿರೋ ಭಾಷೆ ಮೂಲಕವೇ ದಕ್ಕತಾ ಇರ್ತದಾ? ನನಗೇನೋ ಹಂಗಿರಲಿಕ್ಕಿಲ್ಲ ಅಂತ ಅನಸ್ತದ. ಹೊಸಾ ಭಾಷೆ ಕಲೀತಾ ಕಲೀತಾ ನಮ್ಮ ಒಳಗೆ ಇಳಿದರೆ ಆ ಭಾಷೆಯಲ್ಲಿ ನಡೆಸುವ ಸಂವಹನ ಕೂಡ ತಾಯ್ನುಡಿಯ ಸಂವಹನದಷ್ಟೇ ಸಹಜವಾಗ್ತದೆ ಅಂತ ನನ್ನ ಅನಿಸಿಕೆ. ಸಣ್ಣ ಮಕ್ಕಳು ಮಾತು ಕಲಿಯೋ ಕಾಲಕ್ಕ ಸುತ್ತಲಿನವರು ಆಡೋದನ್ನ ಕೇಳಿ ಕೇಳಿಯೇ ಎಷ್ಟೋ ಶಬ್ದಗಳನ್ನ ಗುರ್ತು ಮಾಡಿಕೋತಾವ, ವಾಕ್ಯಗಳನ್ನ ಆಡೋ ಬಗೆನ ಗುರ್ತು ಮಾಡಿಕೋತಾವ ಮತ್ತ ಅದರಂತೆನೇ ಆಡಲಿಕ್ಕೆ ಪ್ರಯತ್ನಮಾಡಿ ಯಶಸ್ವಿ ಆಗತಾವ ಹೌದಲ್ಲೊ? ಯಶಸ್ಸು ಸಿಕ್ಕ ಹಾಗೆಲ್ಲ ಆ ಭಾಷೆನ ತನ್ನದನ್ನಾಗಿ ಮಾಡಿಕೋತ ಹೋಗ್ತಿರತಾವ. ಹೊಸ ಭಾಷೆ ಕಲಿಕೆನೂ ಯಾಕ ಅದೇ ರೀತಿ ಆಗತಿರಬಾರದು?

ನನ್ನ ಮಗನ ವಿಚಾರಗಳು ಇಂಗ್ಲೀಷಿನಲ್ಲೇ ಮೂಡ್ತಿವೆ ಈಗ ಅಂತ ಅನಿಸಲಿಕ್ಕೆ ಹತ್ತಿ ಭಾಳ ದಿವಸ ಆತು. ಇವತ್ತ ಈ ಸಂದರ್ಭದಾಗ ಅದು ಮತ್ತ ಖಾತ್ರಿ ಆತು. ಇದೇ ಮಾತನ್ನ ಕನ್ನಡದಾಗ ಹೆಂಗ ಕೇಳಬೇಕು ಅನ್ನೋದು ಗೊತ್ತಿರಬೇಕು ಇವಗ ಅಂತ ಹೀಗೆ ಹೇಳಿದೆ.

ಅದು ಯದಕ ನಿಂದರತದ ಅಂತ ಕೇಳಬಾರದೋ, ಜೆ ಎಸ್ ಎಸ್ ಅಂದರ ಏನು ಅಥವಾ ಏನರ್ಥ ಅಂತ ಕೇಳಬೇಕು. ‘What does it mean’ ಅಂದ ಹಂಗ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s