ಕಟುಕರ ಗಿಳಿ, ಸಾಧುವಿನ ಗಿಳಿ

ಕಾಮ ಲೋಭ ಕ್ರೋಧ ಮದ ಹಿಂ
ಸಾಮಯಾನೃತ ದಂಭ ಕಪಟ ತ್ರಿ
ಧಾಮನವತಾರಗಳ ಭೇದ ಅಪೂರ್ಣಸುಖ ಬದ್ಧ
ಆಮಿಷನಿವೇದಿತ ಅಭೋಜ್ಯತಿ
ತಾಮಸಾನವನುಂಬ ತಾಮಸ
ಶ್ರೀಮದಾಂಧರ ಸಂಗದಿಂದಲಿ ತಮವೆ ವರ್ಧಿಪದು

ಜ್ಞಾನ ಭಕ್ತಿ ವಿರಕ್ತಿ ವಿನಯ ಪು
ರಾಣ ಶಾಸ್ತ್ರ ಶ್ರವಣ ಚಿಂತನ
ದಾನ ಶಮ ದಮ ಯಜ್ಞ ಸತ್ತಾಹಿಂಸೆ ಭೂತದಯಾ
ಧ್ಯಾನ ಭಗವನ್ನಾಮಕೀರ್ತನ
ಮೌನ ಜಪ ತಪ ವ್ರತ ಸುತೀರ್ಥ
ಸ್ನಾನ ಮಂತ್ರ ಸ್ತೋತ್ರ ವಂದನ ಸಜ್ಜನರ ಗುಣವು

                          – ಹರಿಕಥಾಮೃತಸಾರ – ಸಂಧಿ ೨೫, ನುಡಿ ೧೭,೧೮

ಕಟುಕರ ಗಿಳಿ, ಸಾಧುವಿನ ಗಿಳಿಯ ಕತೆ ಕೇಳಿರಬಹುದು (ಅದು ಭಾಗವತದ್ದೇ?). ಒಂದೇ ತಾಯಿ ಗಿಳಿಯ ಎರಡು ಗಿಳಿ ಮರಿಗಳು ಪ್ರಸಂಗವಶಾತ್ ಬೇರೆ ಬೇರೆ ಮನೆ ಸೇರುತ್ತವೆ. ಒಂದು ಕಟುಕರ ಮನೆಯ ಪಂಜರ ಸೇರಿದರೆ ಇನ್ನೊಂದು ಸಾಧುವೊಬ್ಬನ ಬಳಿ ಸೇರುತ್ತದೆ. ಅವು ಬೆಳೆದಂತೆ ತಮ್ಮ ಸುತ್ತಲಿನ ಪರಿಸರದ ನುಡಿಯನ್ನೇ ಆಡುವದನ್ನ ಸ್ವಾಭಾವಿಕವಾಗಿ ಕಲಿಯುತ್ತವೆ. ಕಟುಕರ ಗಿಳಿ “ಹೊಡಿ, ಕೊಲ್ಲು, ಕತ್ತರಿಸು’ ಅನ್ನುವದನ್ನೇ ಕಲಿತರೆ ಸಾಧುವಿನ ಮನೆಯ ಗಿಳಿ ‘ಬನ್ನಿ, ಹದುಳವೇ. ಕೈಕಾಲು ತೊಳೆಯಿರಿ. ನೀರು ಕುಡಿಯುವಿರಾ, ತಿನ್ನಲಿಕ್ಕೇನಾದರೂ ಬೇಕೆ?’ ಎಂಬ ಆತಿಥ್ಯದ ಮಾತನ್ನಾಡುತ್ತದೆ. ಸ್ವಭಾವ ಪ್ರಭಾವಗಳಲ್ಲಿ ಯಾವದು ಗಟ್ಟಿಯೋ ಅದರದ್ದೇ ತಾನೆ ಆಟ. ಜಗನ್ನಾಥದಾಸರ ಹರಿಕಥಾಮೃತಸಾರದ ಈ ಜೋಡಿ ನುಡಿಗಳನ್ನು ನೋಡಿದಾಗ ಕತೆಯ ನೆನಪಾಯಿತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s