ಭಾಷೆಯೆಂದರೆ…

ನಹಿ ಮಣಿಗಣ ಮಾರ್ಗಣಪರಾ ನಿಪುಣಧಿಯೋsನುಪದಂ
ಸ್ವಪರಗುಪ್ತಿ ಪಾಟನಪಟವೋsಧಿ ಜಲಧಿ ಲಹರೀಪಟಲ
ಪರಿವೃತ್ತಿ ಪರಿಗಣನ ಕೌತುಕೇನ ಸಮಯಮತಿ ಪಾತಯಂತಿ
[ಜಾಣರು ಹೆಜ್ಜೆ ಹೆಜ್ಜೆಗೆ ಮುತ್ತು ಅರಸುತ್ತಾರೆ
- ಕಡಲ ಜಂತುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತ - ಕಡಲಾಳಕ್ಕಿಳಿದು.
ಅವರು ಕಡಲ ಮೇಲಣ ತೆರೆಗಳನ್ನು ಎಣಿಸುತ್ತ ವ್ಯರ್ಥ ಕಾಲಹರಣ ಮಾಡುವುದಿಲ್ಲ]

ನಿನ್ನೆ ಬೆಳಗ್ಗೆ ಆಫೀಸಿಗೆ ಡ್ರೈವ್ ಮಾಡುತ್ತಿದ್ದಾಗ KQED ರೇಡಿಯೋದಲ್ಲಿ ಬರುತ್ತಿದ್ದ Forum ಕಾರ್ಯಕ್ರಮ
ಕೇಳಿದಾಗ ತ್ರಿವಿಕ್ರಮ ಪಂಡಿತಾಚಾರ್ಯರ ಈ ಶ್ಲೋಕವೂ ಮತ್ತು ಬನ್ನಂಜೆ ಗೋವಿಂದಾಚಾರ್ಯರು ಕೊಟ್ಟ
ಅದರ ಅರ್ಥವೂ ನೆನಪಾದವು. ರೇಡಿಯೋದಲ್ಲಿ ಬರುತ್ತಿದ್ದ ಕಾರ್ಯಕ್ರಮ 'What Language Is
(And What It Isn't And What It Could Be)' ಎನ್ನುವ ಪುಸ್ತಕದ ಕುರಿತು ಅದರ
ಲೇಖಕ, ಭಾಷಾ ಶಾಸ್ತ್ರಜ್ಞ ಜಾನ್ ಮೆಕ್‌ವ್ಹೋರ್ಟರ್‌ನ ಸಂದರ್ಶನ. ಭಾಷೆಯನ್ನು ಬಳಸುವ ಸಾಮಾನ್ಯ
(ಅಥವಾ ಹೆಚ್ಚಿನ) ಜನರನ್ನು ಸಮುದ್ರದ ದಂಡೆಯಲ್ಲಿ ಕುಳಿತು ಸಮುದ್ರವನ್ನು ನೋಡುವವರಿಗೂ ಮತ್ತು
ಭಾಷಾ ಶಾಸ್ತ್ರಜ್ಞರನ್ನು ನೀರಿನ ಒಳಗಿಳಿದು ಅಲ್ಲಿಯ ಲೋಕದ ಬೆರಗುಗಳನ್ನು ಅವಲೋಕಿಸುವವರಿಗೂ
ಹೋಲಿಸುವ ರೂಪಕವನ್ನು ಜಾನ್ ಕಟ್ಟಿಕೊಟ್ಟಾಗ ಈ ಶ್ಲೋಕ ನೆನಪಾಯಿತು.

ಭಾಷೆಯೂ ಗಣಿತದಂತೆ ತರ್ಕಬದ್ಧವಾದದ್ದು, ನಿಖರವಾದ (ವ್ಯಾಕರಣದ) ನಿಯಮಗಳಿಗೆ ಅನುಗುಣವಾಗಿಯೇ
ಬಳಸಬೇಕಾದದ್ದು ಎಂದು ಕೆಲವರು ಭಾವಿಸುತ್ತಾರೆ ಆದರೆ ಪ್ರಪಂಚದ ಯಾವುದೇ ಭಾಷೆಯು ಹಾಗಿಲ್ಲ ಮತ್ತು
ಹಾಗೆ ಆಗುವದು ಸಾಧ್ಯವೂ ಇಲ್ಲ ಎನ್ನುವ ಜಾನ್‌ಗೆ ಹಾಗೆ ವ್ಯಾಕರಣಬದ್ಧವಾಗಿ ಬಳಸುವದು ಮಾತ್ರ ಭಾಷೆಯ
ಸರಿಯಾದ ಬಳಕೆ ಎಂದು ಹೇಳುವವರನ್ನು ನೋಡಿದಾಗ, ನಿರಂತರ ಅಲೆಗಳು ಬಂದು ತೊಳೆಯುತ್ತಿರುವ 
ಸಮುದ್ರ ದಡದ ಮರಳನ್ನು ಒಣಗಿಸುವೆ ಎಂದು ಟವೆಲ್ ಹಿಡಿದುಕೊಂಡು ಓಡುವವನ ಚಿತ್ರ ಕಾಣಿಸುತ್ತದಂತೆ!

ಭಾಷೆಯ ಬಳಕೆ, ಅವುಗಳ ಸಂಕೀರ್ಣತೆ, ಹೊಸ ಯುಗದ ಎಸ್ಸೆಮ್ಮೆಸ್ಸು ಭಾಷೆ, ಸ್ಲ್ಯಾಂಗುಗಳ ಭಾಷೆ ಮತ್ತು
ಸ್ಲ್ಯಾಂಗುಗಳಲ್ಲೇ ಇರುವ ಅವುಗಳದ್ದೇ ಆದ ವ್ಯಾಕರಣ, ಕಾಲದಿಂದ ಕಾಲಕ್ಕೆ ಭಾಷೆಯ ಬದಲಾವಣೆ, Ask
ಎನ್ನುವದನ್ನ ಎಷ್ಟೋ ಜನರು Aks ಎಂದು ಬಳಸುವದು (ಅದೇ ರೀತಿ ನ್ಯೂಕ್ಲಿಯರ್ ಬದಲಿಗೆ
ಜಾರ್ಜ್ ಡಬ್ಲು ಬುಷ್ ತರಹ ನ್ಯೂಕುಲರ್ ಎನ್ನುವದು), ಎಷ್ಟೋ ಜನರು ಬೇರೆ ಬೇರೆ ಜನರೊಡನೆ
ಬೇರೆ ಬೇರೆ ರೀತಿ ಮಾತನಾಡಲು ಸಾಧ್ಯವಾಗುವದು, ಹೀಗೆ ಹಲವಾರು ವಿಶಯಗಳನ್ನು ಮುಟ್ಟುವ ಈ
ಮಾತುಕತೆ ಇಷ್ಟವಾಯಿತು. ಪೂರ್ತಿ ಕಾರ್ಯಕ್ರಮವನ್ನು ಇಲ್ಲಿ ಕೇಳಬಹುದು. ಒಟ್ಟಾರೆ ಒಳ್ಳೆ ಕಾರ್ಯಕ್ರಮ
ಅನಿಸಿತು.

ಜಾನ್ ಮೆಕ್‌ವ್ಹೋರ್ಟರನ ಪುಸ್ತಕಗಳ ಪಟ್ಟಿ ಇಲ್ಲಿದೆ. ಮುಂದಿನ ಬಾರಿ ಲೈಬ್ರರಿಗೆ ಹೋದಾಗ ಅವುಗಳಲ್ಲಿ
ಯಾವುದಾದರೂ ಸಿಕ್ಕರೆ ತಂದು ಓದಬೇಕು ಅಂದುಕೊಂಡಿರುವೆ.
Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s