ನಕ್ಷತ್ರ ಭೂಷಣ …

ಮೊನ್ನೆ ನನ್ನಪ್ಪ ಈ ಶಿವಸ್ತುತಿಯನ್ನ ಟೈಪ್ ಮಾಡಿ ಕಳಿಸಿದ್ರು. ಕಾಖಂಡಕಿ ಕೃಷ್ಣದಾಸರು ಈ ಕೃತಿಯಲ್ಲಿ ನಕ್ಷತ್ರಗಳ ಹೆಸರುಗಳನ್ನ ಬಳಸಿಕೊಂಡು ಶಿವನನ್ನ ಸ್ತುತಿಸುತ್ತಾರೆ. ನಕ್ಷತ್ರಗಳ ಹೆಸರನ್ನ ಸೂಚ್ಯವಾಗಿ ತಿಳಿಸುತ್ತಾರಷ್ಟೆ ಹೊರತು ನೇರವಾಗಿ ಹೆಸರನ್ನೇ ಹೇಳಿಬಿಡುವದಿಲ್ಲ.

ನಕ್ಷತ್ರ ರಮಣನಯ್ಯನಿಗೊಲಿದು ಶರವನಿತ್ತೆ
ನಕ್ಷತ್ರದೊಲ್ಲಭನ ತಮ್ಮನ ಸುತನ ಸುಟ್ಟೆ
ನಕ್ಷತ್ರ ಇಲ್ಲದವನ ವೈರಿಗಮನನ ತಾತ
ನಕ್ಷತ್ರ ಕಾಂತ ಧರನೆ||
ನಕ್ಷತ್ರಜಾತನಗ್ರಜನ ಮಸ್ತಕವ ತರಿದೆ
ನಕ್ಷತ್ರ ಸಹಸ್ರ ಉಳ್ಳವನ ದ್ವಾರವನ್ನು ಕಾಯ್ದೆ
ನಕ್ಷತ್ರ ನೀನೇ ಇಂದ್ರಾದಿ ದೇವತೆಗಳಿಗೆ ಗುರುಮಹಿಪತಿಸ್ವಾಮಿ
ನಕ್ಷತ್ರ ಭೂಷಣ ಸಲಹೂ||

ನನ್ನಪ್ಪ ಇದರಲ್ಲಿನ ನಕ್ಷತ್ರಗಳ ಹೆಸರನ್ನು ಇಲ್ಲಿ ಉಲ್ಲೇಖಿಸಿರುವ  ಕ್ರಮದಲ್ಲೇ ಬರೆದು ಕಳಿಸಿದ್ರು.  ಆದರೆ ನಾನೀಗ ಕ್ರಮ ತಪ್ಪಿಸಿ ಕೊಡ್ತಾ ಇದ್ದೇನೆ, ನೋಡಿ ನಿಮಗೆ ಯಾವದು ಯಾವ ಸಾಲಿಗೆ ಅಂತ ಗೊತ್ತಾಗುತ್ತಾ ಅಂತ :).

ಚಂದ್ರ, ಉತ್ತರ, ಆಶ್ಲೇಷ, ರೋಹಿಣಿ, ಜೇಷ್ಠ, ಶ್ರವಣ, ಚಿತ್ತ, ಹಸ್ತಾ

ಕೊ.: ನಕ್ಷತ್ರಗಳ ಸಾಲಿನಲ್ಲಿ ಚಂದ್ರ ಯಾಕೆ ಬಂದ ಅಂತಿರ? ‘ನಕ್ಷತ್ರಾಣಾಮ ಶಶಿ’ ಅಂತಾನೆ ಕೃಷ್ಣ  ಗೀತೆಯಲ್ಲಿ. ಚಂದ್ರ ನಕ್ಷತ್ರಗಳಿಗೆ ಒಡೆಯನಂತೆ.

Advertisements

7 thoughts on “ನಕ್ಷತ್ರ ಭೂಷಣ …

 1. ಚೆನ್ನಾಗಿದೆ 🙂 ಇದನ್ನು ಎಲ್ಲೂ ಓದಿ/ಕೇಳಿರಲಿಲ್ಲ!

  ಹೌದು – ಚಂದ್ರನಿಗೆ ಅಶ್ವಿನಿ ಭರಣಿ ಮೊದಲಾಗಿ ಇಪ್ಪತ್ತೇಳು ಹೆಂಡಿರು, ಅದಕ್ಕೆ ಎಲ್ಲ ನಕ್ಷತ್ರಗಳ ಬಳಿ ಅವನು ಒಂದು ದಿನ ಕಳೆಯುತ್ತಾನೆ ಅನ್ನುವುದು ಆಕಾಶದಲ್ಲಿ ಅವನು ಸುತ್ತುವುದರ ಬಗ್ಗೆ ಮಾಡಿರುವ ಒಂದು ಚೆಂದದ ಕಲ್ಪನೆ.

  ಸಾಲುಗಳ ಪ್ರಕಾರ ಶಿವನು

  ೧. ನಕ್ಷತ್ರ ರಮಣ -> ಉತ್ತರೆಯ ರಮಣ -> ಅಭಿಮನ್ಯುವಿನ ಅಯ್ಯ (ತಂದೆ) ಅರ್ಜುನನಿಗೆ ಒಲಿದು ಪಾಶುಪತಾಸ್ತ್ರವನ್ನು ಕೊಟ್ಟವನು

  ೨.ಆಶ್ಲೇಷಾ ? ರೋಹಿಣಿ? – ಬೇಕಾದ ಕಥೆ ನೆನಪಾಗ್ತಿಲ್ಲ 😦

  ೩.ನಕ್ಷತ್ರವಿಲ್ಲದವನ -> ಶ್ರವಣವಿಲ್ಲದವನ -> ಕಿವಿಯಿಲ್ಲದ ಹಾವಿನ ವೈರಿ (ನವಿಲಿನ) ಮೇಲೆ ಕೂತು ಓಡಾಡುವ ಷಣ್ಮುಖನ ಅಪ್ಪ

  ೪. ನಕ್ಷತ್ರ ಕಾಂತ – ಚಂದ್ರನನ್ನು ಧರಿಸಿರುವವನು

  ೫, ಆಶ್ಲೇಷಾ ? ರೋಹಿಣಿ -> ಯಾಕೆ ಅಂತ ಗೊತ್ತಾಗ್ತಿಲ್ಲ –

  ೬. ನಕ್ಷತ್ರ ಸಹಸ್ರ – ಹಸ್ತ ಸಹಸ್ರ -> ಸಾವಿರ ಕೈಯುಳ್ಳವನ (ಯಾರಿದು ತಿಳಿಯಲಿಲ್ಲ) ಮನೆಬಾಗಿಲನ್ನು ಕಾದವನು

  ೭.ನಕ್ಷತ್ರ ನೀನೇ – ಜ್ಯೇಷ್ಠ ನೀನೇ – ಹಿರಿಯವನು ನೀನು ಸಕಲ ದೇವತಾದಿಗಳಿಗೆ

  ೮. ನಕ್ಷತ್ರ ಭೂಷಣ -> ಚಿತ್ತ ಭೂಷಣ ಸಲಹೋ!

  • ರಾಮಪ್ರಸಾದ್, ಕೊನೆಯದು ಚಿತ್ತ ಅಲ್ಲವಂತೆ. ಅಲ್ಲಿ ಶಿವ ನಾಗಭೂಷಣನಾಗಿ ಬರಬೇಕಂತೆ. ಎರಡನೆಯದಕ್ಕೆ ನನ್ನಪ್ಪ ಕಳಿಸಿದ ರೋಹಿಣಿ ಸರಿ ಇದೆಯಾ ಅಂತ ಅನುಮಾನ ಬಂದಿದೆ ನನಗೆ. ಶಿವ ಸುಟ್ಟ ಕಾಮ ಕೃಷ್ಣನ ಮಗನಾಗಿ ಹುಟ್ಟಿದ್ದನಲ್ಲವೇ? ಎರಡನೇ ಸಾಲು ಅದೇ ಕತೆ ಹೇಳುತ್ತಿದ್ದರೆ ರೋಹಿಣಿ ಸರಿ ಹೋಗುವದಿಲ್ಲ. ನಕ್ಷತ್ರ ಜಾತನಗ್ರಜನ ಸಾಲು ಬಹುಶಃ ಬ್ರಹ್ಮನ ೫ನೇ ತಲೆ ಕಿತ್ತ ಕತೆ ಹೇಳುತ್ತದೆ. ಸಾವಿರ ಕೈಯವ ಯಾರು ಅಂತ ನನಗೂ ಇನ್ನೂ ಗೊತ್ತಾಗಿಲ್ಲ. ಕೇಳಬೇಕು ಏನು ಕತೆ ಅದು ಅಂತ.

   ಇದನ್ನ ನನ್ನಪ್ಪ ಕಳಿಸಿದ ಮೇಲೆ ಅವರೊಡನೆ ಮಾತಾಡಲಿಕ್ಕೆ ಆಗಿಲ್ಲ. ಹೀಗಾಗಿ ನನಗೂ ಎಲ್ಲ ಸರಿ ಉತ್ತರಗಳ ಕತೆ ಗೊತ್ತಿಲ್ಲ. ಎಲ್ಲ ಕತೆಗಳನ್ನ ಕೇಳಿಕೊಂಡು ಮತ್ತೆ ಬರೆಯುವೆ :). ಇದನ್ನ ಬಿಡಿಸಿದ್ದಕ್ಕೆ ಧನ್ಯವಾದ, ಅನಿಲ

 2. ನಕ್ಷತ್ರದೊಲ್ಲಭನ ತಮ್ಮನ ಮಗನ ಸುಟ್ಟೆ ಅನ್ನುವುದು ರೋಹಿಣಿಗೆ ಸರಿಯಾಗುವುದಿಲ್ಲ. ಏಕೆಂದರೆ ಬಲರಾಮನ ತಾಯಿ ರೋಹಿಣಿ. ಹೆಂಡತಿ ರೇವತಿ.

  ಅದಕ್ಕೆ ಉತ್ತರ ರೇವತಿ 🙂 ಆಗಬೇಕು,

 3. ನನ್ನಪ್ಪ ಕಳಿಸಿದ ಉತ್ತರಗಳು ಕ್ರಮವಾಗಿ ಹೀಗಿದ್ದವು. ಉತ್ತರ,ರೋಹಿಣಿ,ಶ್ರವಣ,ಚಂದ್ರ,ಚಿತ್ತಾ,ಹಸ್ತಾ, ಜೇಶ್ಠಾ, ಆಶ್ಲೇಷ. ಇವುಗಳಲ್ಲಿ ರೋಹಿಣಿ ತಪ್ಪಾಗಿದೆ. ಅದು ರೇವತಿ ಆಗಬೇಕು. ಸಾವಿರ ಕೈ ಇರುವವನ ಕತೆ ಅಂದರೆ ಬಾಣಾಸುರನ ಕತೆಯಂತೆ. ನಕ್ಷತ್ರಜನಗ್ರಜ ಅಂದರೆ ಚಿತ್ತಜ, ಕಾಮನ ಅಗ್ರಜ (ಅಂದರೆ ಎಲ್ಲರಿಗಿಂತ ಮೊದಲು ಹುಟ್ಟಿದ) ಬ್ರಹ್ಮನಂತೆ. ಹಾಗಾಗಿ ತಲೆ ತರಿದ ಕತೆ ಬ್ರಹ್ಮನ ೫ನೇ ತಲೆ ತರಿದ ಕತೆಯೇ. ಆಶ್ಲೇಷ ಎನ್ನುವದು ಸರ್ಪವನ್ನ ತಿಳಿಸುವುದಮ್ತೆ.

 4. ಉತ್ತರಾ, ಶ್ರವಣ, ಚಂದ್ರ, ಹಸ್ತಾ, ಜೇಷ್ಠಾ, ಆಶ್ಲೇಷಾ- ಇವಿಷ್ಟು ಸರಿಯಾಗಿ ಬರೆದಿದ್ದೆ.

  ಎರಡನೇದ್ದು ರೇವತಿ ಆಗಬೇಕೆಂದು ನನಗೂ ಅನಿಸಿತು (ರೇವತಿ ವಲ್ಲಭ- ಬಲರಾಮ-ನ ತಮ್ಮ-ಕೃಷ್ಣ-ನ ಸುತ- ಮನ್ಮಥ-ನ ಸುಟ್ಟವ- ಶಿವ).

  ಬಾಣಾಸುರನ ಕಥೆ ಗೊತ್ತಿಲ್ಲ, ಸಹಸ್ರಬಾಹು- ಕಾರ್ತವೀರ್ಯಾಜುನನ ಕಥೆಯಲ್ಲಿ ಶಿವನೆಲ್ಲಿ? ಗೊಂದಲದಲ್ಲಿದ್ದೆ.

  ಎಲ್ಲವುಗಳ ಕಥೆ ಗೊತ್ತಾದ ಮೇಲೆ ಇಲ್ಲಿ ಬರೀತೀರ?

  • ಕಾರ್ತವೀರ್ಯಾಜುನನ ಕತೆ ಯಾವುದು ಎಂದು ನನಗೂ ಗೊಂದಲವಾಗಿತ್ತು. ಬಾಣಾಸುರನ ಕತೆ ಇಲ್ಲಿದೆನೋಡಿ (ಶಿವ ಅವನ ಮನೆ ಕಾಯ್ದ ಬಗ್ಗೆ ಅಲ್ಲಿ ಹೆಚ್ಚು ಮಾಹಿತಿ ಇಲ್ಲ. ಕೃಷ್ಣನೊಡನೆ ಯುದ್ಧದಲ್ಲಿ ಬಾಣಾಸುರನ ಪರವಾಗಿ ಯುದ್ಧ ಮಾಡಿದ್ದನ್ನ ‘ಮನೆ ಕಾಯ್ದ’ ಎಂದು ಹೇಳಿದ್ದಾರೆನೋ ಕೇಳಬೇಕು). ಇದರಲ್ಲಿನ ಕತೆಗಳನ್ನ ಇಲ್ಲಿ ಬರೆಯಬೇಕು ಅಂದುಕೊಂಡಿದ್ದೇನೆ, ಯಾವಾಗ ಆಗುವದೋ ಗೊತ್ತಿಲ್ಲ :).

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s