ಸ್ಯಾನ್ ಫ್ರಾನ್ಸಿಸ್ಕೋ ಝೂ

ಸ್ಯಾನ್ ಫ್ರಾನ್ಸಿಸ್ಕೋದ ಝೂಗೆ ಹೋಗಬೇಕು ಅಂತ ಯೋಚಿಸಿ ಎಷ್ಟೋ ದಿನಗಳಾಗಿದ್ದವು. ಅಂತೂ ಅದಕ್ಕೊಂದು ಮುಹೂರ್ತ ಕೂಡಿ ಬಂತು. ಬೇಸಿಗೆ ರಜಕ್ಕೆ ಭಾರತಕ್ಕೆ ಹೊರಟಿದ್ದ ನನ್ನ ಕಸಿನ್ ಒಬ್ಬರನ್ನ ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣಕ್ಕೆ ಮೊದಲು ತಲುಪಿಸಿ ಅಲ್ಲಿಂದ ಝೂದ ಕಡೆಗೆ ಹೊರಟು ಝೂ ತಲುಪಿದಾಗ ಸಮಯ ಹನ್ನೆರಡು ಘಂಟೆ. ಒಳಗೆ ಹೋಗುತ್ತಲೇ ಮೊದಲು ಕಂಡವರು ಈ ಉದ್ದ ಕತ್ತಿನವರು. ಮೊದಲು ತಮ್ಮ ಪಾಡಿಗೆ ತಾವು ಬೇರೆ ಬೇರೆ ಕಡೆ ಮೇಯುತ್ತಿದ್ದ ಇವು ಮುಂದೆ ಸ್ವಲ್ಪ ಹೊತ್ತಿಗೆ ತಮ್ಮ ಉದ್ದ ಕತ್ತಿನ ಕಷ್ಟ ಸುಖ ಹೇಳಿಕೊಳ್ಳುತ್ತಿರುವಂತೆ ಹತ್ತಿರ ಬಂದಿದ್ದವು.

ಉದ್ದ ಕತ್ತಿನ ಜೊತೆಗಾರರು

ಉದ್ದ ಕತ್ತಿನ ಜೊತೆಗಾರರು

ಇವತ್ತು ಅಷ್ಟೇನೂ ಬಿಸಿಲಿರಲಿಲ್ಲ. ಸ್ವಲ್ಪ ತಣ್ಣಗೆ ಗಾಳಿ ಕೂಡ ಇತ್ತು. ಈ ಗೋರಿಲ್ಲ ಮಹಾಶಯ ಅಲ್ಲೆ ಒಂದು ಗುಪ್ಪಿಯಲ್ಲಿದ್ದ ಒಣ ಹುಲ್ಲನ್ನ ಹಾಸಿ ಹಾಸಿಗೆ ಮಾಡಿಕೊಂಡು, ಸೋಮಾರಿತನದ ನಿದ್ದೆ ತೆಗೆದೇಳಲು ಪ್ರಯತ್ನಿಸುತ್ತಿತ್ತು. ಅಲ್ಲೇ ಹತ್ತಿರದಲ್ಲಿ ಇನ್ನೆರಡು ಗೋರಿಲ್ಲಾಗಳೂ ಕುಳಿತುಕೊಂಡು ತೂಕಡಿಸುತ್ತಿದ್ದವು. ಜುಲೈ ೪ ರಜ ಎಂದು ಅವಕ್ಕೂ ಗೊತ್ತಿರಬೇಕು. ಪಾಪ ಅವಕ್ಕೆ ಸ್ವಾತಂತ್ರ್ಯ ಮಾತ್ರ ಇಲ್ಲ.

ಈ ಗೊರಿಲ್ಲಾಗೆ ಸೋಮಾರಿತನದ ನಿದ್ದೆ

ಈ ಗೊರಿಲ್ಲಾಗೆ ಸೋಮಾರಿತನದ ನಿದ್ದೆ

ಸ್ವಲ್ಪ ಹೊತ್ತಿನಲ್ಲೆ ಇನ್ನೊಂದು ಗೋರಿಲ್ಲಾ ಯಜಮಾನನ ಠೀವಿಯಿಂದ ಹೊರ ಬಂದಿತು. ಅತ್ತಿತ್ತ ನೋಡಿ, ಒಮ್ಮೆ ಎಲ್ಲ ಕಡೆ ಅಡ್ಡಾಡಿ, ಕಣ್ಣಲ್ಲೇ ಮಾತನಾಡಿಸಿ ಮತ್ತೆ ಅದೇ ಠೀವಿಯಿಂದ ಬಂದ ರಾಜ ಕಾರ್ಯ ಆದಂತೆ ಮರಳಿ ಒಳಗೇ ಹೋಯಿತು.

ಯಜಮಾನ?

ಯಜಮಾನ?

ಈಗೊಂದೆರಡು ವರ್ಷಗಳ ಹಿಂದೆ ಕ್ರಿಸ್ಮಸ್ ದಿವಸ ಈ ಹುಲಿ ಪಂಜರದಿಂದ ಹುಲಿ ಹೊರಗೆ ಹಾರಿ ಬಂದು ಒಂದಷ್ಟು ಜನರನ್ನ ಗಾಯಗೊಳಿಸಿದ್ದೂ ಅಲ್ಲದೇ ಒಬ್ಬನನ್ನ ಕೊಂದೂ ಹಾಕಿತ್ತು. ಮುಂದೆ ಎಷ್ಟೋ ದಿನ ಮುಚ್ಚಲಾಗಿದ್ದ ಹುಲಿ ಪ್ರದರ್ಶನ ಮತ್ತೆ ತೆರೆಯುವ ಮುಂಚೆ ಇನ್ನೊಂದಿಷ್ಟು ಸುರಕ್ಷಾ ವ್ಯವಸ್ಥೆಗಳನ್ನ ಹಾಕಿದ್ದಾರೆ. ಕ್ಯಾಲಿಫೋರ್ನಿಯಾದ ಗ್ರಿಝ್ಲಿ ಬೇರುಗಳೂ ಇಲ್ಲಿವೆ.

ಹುಲಿ ಕರಡಿಗಳ ಠೀವಿ

ಹುಲಿ ಕರಡಿಗಳ ಠೀವಿ

ಹಾಗೇ ಮುಂದೆ ಸುತ್ತಾಡುವಾಗ ಸೋಗೆ ಹರಡಿಕೊಂಡ ನವಿಲು, ಒಂಟಿ ಕಾಲಲ್ಲಿ ಧ್ಯಾನಕ್ಕೆ ನಿಂತ ಬಕಗಳ ವಿವಿಧ ತಳಿಗಳೂ ಅಲ್ಲದೆ ಗುಬ್ಬಚ್ಚಿಗಳೂ ಸಾಕಷ್ಟು ಕಂಡವು

ಸೋಗೆ ಹರಡಿ ನಿಂತ ನವಿಲೂ, ಒಂಟಿ ಕಾಲಿನಲಿ ನಿಂತು ಧ್ಯಾನಿಸುವ ಬಕಗಳೂ

ಸೋಗೆ ಹರಡಿ ನಿಂತ ನವಿಲೂ, ಒಂಟಿ ಕಾಲಿನಲಿ ನಿಂತು ಧ್ಯಾನಿಸುವ ಬಕಗಳೂ

ಇತ್ತೀಚೆಗೆ ಕೊಂಡ ಫ್ಲಿಪ್ಪಿನಲ್ಲಿ ಮೂವಿ ಮಾಡುವದನ್ನ ಟ್ರೈ ಮಾಡಿ ಯೂ ಟ್ಯೂಬಿನಲ್ಲಿ ಏರಿಸಿದ್ದು ಇಲ್ಲಿದೆ. ಹುಲಿ ಕರಡಿಗಳ ಓಡಾಟವನ್ನ ಅದರಲ್ಲಿ ನೋಡಬಹುದು.

(Hi resolution ಚಿತ್ರಗಳಿಗಾಗಿ ಇಲ್ಲಿರುವ ಚಿತ್ರಗಳ ಮೇಲೆ ಕ್ಲಿಕ್ಕಿಸಿ. ಝೂದ ಮತ್ತಷ್ಟು ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s