ನಮಃ ಶ್ರೀಪಾದರಾಜಾಯ

’ನನ್ನನ್ನು ನೋಡಿ, ಊರ ಕಡೆ ಹೊರಟಿರುವ ಹಸುಗಳನ್ನ ನೋಡಿ, ಮುಳುಗುತ್ತಿರುವ ಸೂರ್ಯನನ್ನ ನೋಡಿ, ನಿಮಗೇ ಗೊತ್ತಾಗುತ್ತದೆ ಅಬ್ಬೂರು ಎಷ್ಟು ದೂರದಲ್ಲಿದೆ ಅಂತ’ ಎಂದು ತನ್ನನ್ನು ವಿಚಾರಿಸಿದ ಸ್ವರ್ಣವರ್ಣ ತೀರ್ಥರಿಗೆ ಚಮತ್ಕಾರಿಕವಾಗಿ ಹೇಳಿದ ಬಾಲಕ ಲಕ್ಷ್ಮೀನಾರಾಯಣನ ಚುರುಕುತನಕ್ಕೆ ಮನಸೋತ ಸ್ವರ್ಣವರ್ಣತೀರ್ಥರು ಅವನನ್ನು ಬಿಡಲೇ ಇಲ್ಲ. ಅದೇ ಬಾಲಕ ಲಕ್ಷ್ಮೀನಾರಾಯಣ ಮುನಿಯಾಗಿ, ತನ್ನ ವಿದ್ವತ್ತಿನಿಂದ ವಿಭುದೇಂದ್ರರು ಮತ್ತು ರಘುನಾಥ ತೀರ್ಥರಿಂದ ಶ್ರೀಪಾದರಾಜರು ಎಂದೇ ಹೆಸರಾದ. ತಮಿಳುನಾಡಿನ ಭಕ್ತಿ ಪಂಥದಿಂದ ಪ್ರಭಾವಿತರಾಗಿ ಕನ್ನಡ ಹಾಡುಗಳನ್ನ ಮೈಲಿಗೆ ಎಂದು ದೂರವಿಟ್ಟಿದ್ದ ಕಾಲದಲ್ಲಿ ದೇವ ಪೂಜೆಯ ವೇಳೆಗೆ ಕನ್ನಡದ ಕೀರ್ತನೆಗಳನ್ನು ಹಾಡಿ ಹಾಡಿಸುವ ಸಂಪ್ರದಾಯದ ಆದ್ಯ ಪ್ರವರ್ತಕರಾದರು, ದಾಸ ಸಾಹಿತ್ಯದ ಹರಿಕಾರರೂ ಆದರು. ವಿಜಯನಗರ ಸಂಸ್ಥಾನದ ಮೂಡಣದ ಬಾಗಿಲು ಮುಳಬಾಗಿಲು, ಅಲ್ಲಿ ಅವರ ಕರೆಗೆ ಓಗೊಟ್ಟ ಭಾಗೀರಥಿ ಹರಿದು ಬಂದ ನರಸಿಂಹ ತೀರ್ಥದ ತಟವೇ ಅವರ ನೆಲೆಬೀಡು. ಬೆಂಗಳೂರಿನ ಕಡೆಯಿಂದ ತಿರುಪತಿಗೆ ಹೋಗುವಾಗ ಮುಳಬಾಗಿಲಿನಲ್ಲಿಳಿದು ಶ್ರೀಪಾದರಾಯರ ದರ್ಶನ ಪಡೆದು ಮುಂದೆ ಹೋಗುವ ಪರಿಪಾಠವೂ ಇದೆ.

ಹರಿದಾಸ ಸಾಹಿತ್ಯದ ೪ ಘಟ್ಟಗಳನ್ನು ಗುರುತಿಸುವ ಮತ್ತು ಆಯಾ ಘಟ್ಟಗಳಲ್ಲಿ ಹರಿದಾಸ ಸಾಹಿತ್ಯವನ್ನು ಬೆಳೆಸಿದ ನಾಲ್ವರು ಮಹನೀಯರಿಗೆ ನಮಿಸುವ ಈ ಶ್ಲೋಕದಲ್ಲಿ ಶ್ರೀಪಾದರಾಜರಿಗೇ ಅಗ್ರ ನಮನ.

ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸಯೋಗಿನೇ
ನಮಃ ಪುರಂದರಾರ್ಯಾಯ ವಿಜಯಾರ್ಯಾಯ ತೇ ನಮಃ

ಶ್ರೀಪಾದರಾಜರ ’ಪೋಪು ಹೋಗೋಣ ಬಾರೊ ರಂಗ’ ಪದವನ್ನ ವಿದ್ಯಾಭೂಷಣರ ಹಾಡುಗಾರಿಕೆಯಲ್ಲಿ ಕೇಳುವದು ನನಗೆ ಬಲು ಇಷ್ಟ. ಜ್ಯೇಷ್ಠ ಶುದ್ಧ ಚತುರ್ದಶಿ (ಜೂನ್ ೬ ೨೦೦೯) ಶ್ರೀಪಾದರಾಜರ ಆರಾಧನೆಯ ದಿವಸ. ಅವರನ್ನು ಸ್ಮರಿಸುತ್ತಾ ಈ ಪದ. (ಹರಿದಾಸ ಸಂಪದದಲ್ಲೂ ಇದನ್ನ ನೋಡಬಹುದು). ವಿದ್ಯಾಭೂಷಣರು ಹಾಡಿದ್ದನ್ನ ಕನ್ನಡ ಆಡಿಯೋ ಡಾಟ್ ಕಾಮಿನ ಈ ಲಿಂಕಿನಲ್ಲಿ ಕೇಳಬಹುದು.

ಪೋಪು ಹೋಗೋಣ ಬಾರೊ ರಂಗ
ಪೋಪು ಹೋಗೋಣ ಬಾರೊ

ಜಾಹ್ನವಿಯ ತೀರವಂತೆ ಜನಕರಾಯನ ಕುವರಿಯಂತೆ
ಜಾನಕಿಯ ವಿವಾಹವಂತೆ ಜಾಣ ನೀನು ಬರಬೇಕಂತೆ

ಕುಂಡಿನೀಯ ನಗರವಂತೆ ಭೀಷ್ಮಕರಾಜನ ಕುವರಿಯಂತೆ
ಶಿಶುಪಾಲನ ಒಲ್ಲಳಂತೆ ನಿನಗೆ ವಾಲೆ ಬರೆದಳಂತೆ

ಪಾಂಡವರು ಕೌರವರಿಗೆ ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಡಬೇಕಂತೆ ರಂಗವಿಠಲ ಬರಬೇಕಂತೆ

ಈ ಜಾಲತಾಣದಲ್ಲಿ ಶ್ರೀಪಾದರಾಜರ ಬೃಂದಾವನದ ಚಿತ್ರದ ಜೊತೆಗೆ ಒಂದಷ್ಟು ಪದ, ಸುಳಾದಿ, ಉಗಾಭೋಗಗಳ pdf ಫೈಲುಗಳೂ ಇವೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s