ಸ್ವಾತಂತ್ರ್ಯ

ಇತ್ತೀಚೆಗೆ ಯಾವುದೋ ವೆಬ್ ಸೈಟಿನಲ್ಲಿ ರವೀಂದ್ರನಾಥ ಟಾಗೋರರ ಈ ಪದ್ಯ ನೋಡಿದಾಗ ಕಟ್-ಪೇಸ್ಟ್ ಮಾಡಿಟ್ಟುಕೊಂಡಿದ್ದೆ.

Where the mind is without fear and the head is held high;
Where knowledge is free;
Where the world has not been broken up into fragments by narrow domestic walls;
Where words come out from the depth of truth;
Where tireless striving stretches its arms towards perfection;
Where the clear stream of reason has not lost its way into the dreary desert sand of dead habit;
Where the mind is led forward by thee into ever-widening thought and action …
Into that heaven of freedom, my father, let my country awake.

ಇವತ್ತು ಮತ್ತೆ ಓದಿದಾಗ ಕನ್ನಡಕ್ಕಿಳಿಸಬೇಕೆನಿಸಿತು.

ಮನಕೆಂದು ಅಳುಕಿರದಲ್ಲಿ, ತಲೆ ಎತ್ತಿ ನಿಲ್ಲುವಲ್ಲಿ
ಅಂಕೆಯಿಲ್ಲದ ಅರಿವಿರುವಲ್ಲಿ
ಅಲ್ಲಲ್ಲೆ ಎದ್ದು ವಿಶ್ವ ವಿಸ್ತಾರ ಮರೆಸುವ ಕಿರುದಾರಿ ಗೋಡೆಗಳಿಲ್ಲದಲ್ಲಿ
ಮಾತುಗಳೆಲ್ಲವು ಸತ್ಯವಚನಗಳಾಗಿರುವಲ್ಲಿ
ದಣಿಯದ ದುಡಿತ ಪೂರ್ಣತೆಯೆಡೆಗೆ ಕೈ ಚಾಚುವಲ್ಲಿ
ನಿರ್ಜೀವ ನಡವಳಿಕೆಗಳ ಮರಳುಗಾಡಿನಲ್ಲಿ ತಿಳಿವಿನ ತೊರೆ ದಿಕ್ಕೆಟ್ಟು ಬತ್ತಿರದಲ್ಲಿ
ಎಡೆ ಬಿಡದೆ ವಿಸ್ತರಿಸುವ ಕಾರ್ಯ ಚಿಂತನೆಗಳೆಡೆಗೆ ಬುದ್ಧಿಯ ನೀ ನಡೆಸುವಲ್ಲಿ
ಸ್ವಾತಂತ್ರ್ಯದ ಆ ಸ್ವರ್ಗದ ಕಡೆಗೆನ್ನ ನಾಡ ಕಣ್ಬಿಡಿಸೊ, ಹೇ ತಂದೆ

Advertisements

4 thoughts on “ಸ್ವಾತಂತ್ರ್ಯ

 1. ಚೆನ್ನಾಗಿದೆ!

  ಬಾಲ್ಯದಿಂದ ಹಾಡಿ ನನ್ನ ಮನಸ್ಸಿನಲ್ಲಿ ಇನ್ನೂ ಗಟ್ಟಿಯಾಗಿ ಉಳಿದಿರುವ ಇನ್ನೊಂದು ಅನುವಾದ ಹೀಗಿದೆ:

  ಆ ಸ್ವತಂತ್ರ ಸ್ವರ್ಗಕೆ ನಮ್ಮ ನಾಡು ಏಳಲೇಳಲೇಳಲೇಳಲಿ!

  ಎಲ್ಲಿ ಮನವು ನಿರ್ಭಯದಿ ತಲೆಯನೆತ್ತಿ ನಿಲುವುದೋ
  ಎಲ್ಲಿ ಜ್ಞಾನ ಸುಧಾಪಾನ ಎಲ್ಲರಿಗೂ ಸಿಗುವುದೋ
  ಆ ಸ್ವತಂತ್ರ ಸ್ವರ್ಗಕೆ ನಮ್ಮ ನಾಡು ಏಳಲೇಳಲೇಳಲೇಳಲಿ!

  ಎಲ್ಲಿ ಮನೆಗೆ ಅಡ್ಡಗೋಡೆ ಇಲ್ಲದೆಯೇ ವಿಶಾಲವೋ
  ಎಲ್ಲಿ ಮಾತು ಸತ್ಯದಾಳದಿಂದ ಹೊಮ್ಮಿ ಬರುವುದೋ
  ಆ ಸ್ವತಂತ್ರ ಸ್ವರ್ಗಕೆ ನಮ್ಮ ನಾಡು ಏಳಲೇಳಲೇಳಲೇಳಲಿ!

  ಎಲ್ಲಿ ಸತತ ಕರ್ಮ ಪೂರ್ಣಸಿದ್ಧಿ ಪಡೆದು ಮೆರೆವುದೋ
  ಎಲ್ಲಿ ತಿಳಿವು ಕಟ್ಟಳೆಯ ಮಳಲ ತೊರೆದು ಹರಿವುದೋ
  ಆ ಸ್ವತಂತ್ರ ಸ್ವರ್ಗಕೆ ನಮ್ಮ ನಾಡು ಏಳಲೇಳಲೇಳಲೇಳಲಿ!

  ಎಲ್ಲಿ ನೀನು ನಮಗೆ ಧೈರ್ಯ ಎಲ್ಲಿ ನೀನು ನಮಗೆ ಸ್ಥೈರ್ಯ
  ವರವಿಕಾಸಗೊಳಿಸಿ ಸದಾ ಅಭ್ಯುದಯವ ಕೋರುವೆಯೋ
  ಆ ಸ್ವತಂತ್ರ ಸ್ವರ್ಗಕೆ ನಮ್ಮ ನಾಡು ಏಳಲೇಳಲೇಳಲೇಳಲಿ!

  • ಸೊಗಸಾದ ಅನುವಾದಕ್ಕೆ ಥ್ಯಾಂಕ್ಸ್ bedathur ಅವರೆ. ಮೂಲದಲ್ಲಿನ Where the clear stream of reason … ಸಾಲು ಬಹಳ ಹಿಡಿಸಿತು ನನಗೆ. ಅದೇ ಸಾಲು ನೀವು ಕೊಟ್ಟ ಅನುವಾದದಲ್ಲೂ ತುಂಬ ಚನ್ನಾಗಿದೆ. ಈ ಅನುವಾದ ಯಾರು ಮಾಡಿದ್ದು ಎಂದೇನಾದರೂ ಗೊತ್ತೇ?

 2. ಚೆನ್ನಾಗಿದೆ ಅನಿಲ್.

  ಇದನ್ನೇ(?) ಲಕ್ಷ್ಮೀನಾರಾಯಣ ಭಟ್ಟರೂ ಅನುವಾದಿಸಿದ್ದಾರೆ ಅಂತ ನೆನಪು.

  ಎಲ್ಲಿ ಅರಿವಿಗೆ ಇರದೋ ಬೇಲಿ ಎಲ್ಲಿ ಇರದೋ ಭಯದ ಗಾಳಿ ಅಂತ ಶುರವಾಗುತ್ತೆ ಅದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s