ಇಂಗಾಲದ ಹೆಜ್ಜೆ ಗುರುತು

ಬಹಳ ದಿವಸಗಳಿಂದ ಯೋಚಿಸ್ತಾ ಇದ್ದೆ, ನನ್ನ ಕಾರ್ಬನ್ ಫೂಟ್ ಪ್ರಿಂಟ್ ಎಷ್ಟಿರಬಹುದು ಅಂತ. ಇವತ್ತು ಒಂದೆರಡು ವೆಬ್ ಸೈಟ್ ಸಿಕ್ತು. ಅಲ್ಲಿ ನನ್ನ ಮಾಹಿತಿ ಹಾಕಿದಾಗ ಬಂದದ್ದು ಈ ಚಿತ್ರಗಳು ..

ಮೊದಲನೇ ಚಿತ್ರದ ಪ್ರಕಾರ ಎಲ್ಲರೂ ನನ್ನಷ್ಟೇ ಬಳಸಿದರೆ ೪ ವರೆ ಭೂಮಿ ಬೇಕಂತೆ!!!

ವರ್ಷವಿಡೀ ಇಲ್ಲಿ ಕಾರು ಓಡಿಸುವದು ಹಾಗೂ ವರ್ಷಕ್ಕೊಮ್ಮೆ ಭಾರತಕ್ಕೆ ಹೋಗುವದು ಇವುಗಳಿಂದ ಹೊಮ್ಮುವ ಇಂಗಾಲದ ಪ್ರಮಾಣ ಹೆಚ್ಚು ಕಡಿಮೆ ಸಮ. ಕಾರು ಹೊರ ಹಾಕುವ ಪ್ರಮಾಣ ಒಂದಷ್ಟು ಹೆಚ್ಚೇ. ನನ್ನ ೧೦ ವರ್ಷ ಹಳೇ ಹೊಂಡಾ ಅಕಾರ್ಡ್ ಓಡಿಸುವದರ ಬದಲು ಟೊಯೋಟಾ ಪ್ರೈಯಸ್ ಓಡಿಸಿದರೆ foot print ಸಾಕಷ್ಟು ಕಡಿಮೆ ಮಾಡಬಹುದು. ಆದರೆ ೧೦ ವರ್ಷ ಹಳೆಯದಾದರೂ ಕೇವಲ ೮೦ ಚಿಲ್ಲರೆ ಸಾವಿರ ಮೈಲು ಓಡಿರುವ ಕಾರು ಈಗಲೇ ಯಾಕೆ ಬದಲಾಯಿಸಬೇಕು ?

ಅಥವಾ ಆಫೀಸಿಗೆ ಹತ್ತಿರ ಮನೆ ಮಾಡಬೇಕು, ಹೆಚ್ಚಿನ ಓಡಾಟ ಅಲ್ಲಿಗೇ ತಾನೆ? ಆಗ ಬಾಡಿಗೆ ಈಗಿನ ಎರಡರಷ್ಟಾಗುತ್ತದೆ! ಹೀಗಾಗಿ ಅದನ್ನ ಮಾಡಲಾಗದು.

ಉಳಿದದ್ದು ವಾರದಲ್ಲಿ ಒಂದು ದಿವಸ ಕಾರಿನ ಬದಲು ಬಸ್ಸಿನಲ್ಲಿ ಆಫೀಸಿಗೆ ಹೋಗುವದು. ಆದರೆ ಸಧ್ಯಕ್ಕೆ ಅದನ್ನ ಮಾಡಲಾಗದು ಅನಿಸುತ್ತದೆ. ನೋಡಬೇಕು ಹೇಗಾದರೂ ಸಾಧ್ಯವಾದರೆ ಒಳ್ಳೆಯದು 🙂

ತಿನ್ನುವದು ಸಸ್ಯಾಹಾರ, ಹೆಚ್ಚಾಗಿ ಕೊಳ್ಳುವದು ಭಾರತೀಯರ ಅಂಗಡಿಗಳಿಂದ. ಅವರು ತರಕಾರಿಗಳನ್ನ ತರಿಸೋದು ಎಲ್ಲಿಂದಲೋ? ಸುಪರ್ ಮಾರ್ಕೆಟ್ಟುಗಳಿಗೆ ಹೋಲಿಸಿದರೆ ಕಮ್ಮಿ ಬೆಲೆ ಇರುವದರಿಂದ ಅವು ಅಷ್ಟೇನೂ ದೂರದಿಂದ ಬರುವದಿಲ್ಲ ಅನಿಸುತ್ತದೆ.

ಮನೆಯಲ್ಲಿ CFL ಬಳಸುತ್ತೇವೆ, ಡಿಶ್ ವಾಶರ್ ಹಾಕುವಾಗ ’Air Dry’ ಬಳಸೋದು, ಹಾಗೇ ಹಾಕುವ ಸಮಯ ಕೂಡ ಅತಿ ಕಡಿಮೆ. ಪೂರ್ತಿ ತುಂಬಿದಾಗಲೇ ಹಾಕೋದು ಹಾಗೂ ರಾತ್ರಿ ಮಲಗುವ ಸಮಯದಲ್ಲಿ ಹಾಕುವದು. ಅಲ್ಲಿ ಇನ್ನೇನೂ ಕಡಿಮೆ ಮಾಡುವದು ಸಾಧ್ಯ ಅನಿಸುವದಿಲ್ಲ. ಅಷ್ಟಕ್ಕೂ ನನ್ನ ಕರೆಂಟ್ ಬಿಲ್ ಬರೋದೊ ೨೫ ಚಿಲ್ರೆ ಡಾಲರು.

ನೀರಿನ ಬಳಕೆ ಇನ್ನಷ್ಟು ಸುಧಾರಿಸಬಹುದು. ಗುಲ್ಬರ್ಗಾ/ಸುರತ್ಕಲ್ಲಿನ ನೀರಿಲ್ಲದ ದಿನಗಳಲ್ಲಿ ಒಂದು ಬಕೆಟ್ಟಿನಲ್ಲೇ ಆಗುತ್ತಿದ್ದ ಪ್ರಾತಃ ಕಾಲದ ಕೆಲಸಗಳಿಗೆ ಈಗ (ಮುಖ್ಯವಾಗಿ ಸ್ನಾನಕ್ಕೆ) ಸಾಕಷ್ಟು ನೀರು ಪೋಲಾಗುತ್ತದೆ ಅನಿಸುತ್ತದೆ. ನೋಡೊಣ ಎಷ್ಟು ಕಡಿತ ಮಾಡಬಹುದು.

ಭಾರತದಲ್ಲಿ ತರಕಾರಿ ಮಾರ್ಕೆಟ್ಟಿಗೆ ಹೋಗುವಾಗ ಹೆಗಲಿಗೊಂದು ಚೀಲ ಹಾಕಿಕೊಂಡು ಹೋಗುವಂತೆ ಇಲ್ಲೂ ಮತ್ತೆ ಮತ್ತೆ ಬಳಸುವ ಚೀಲ ಇಟ್ಟುಕೊಂಡರೆ ಒಂದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡ ಬಹುದು. ಆದರೆ ವಾರಕ್ಕೊಮ್ಮೆ ಅಂಗಡಿಗೆ ಹೋಗಿ ಹೊತ್ತುಕೊಂಡು ಬರುವ ಸಾಮಾನು ತರಲು ಸಾಕಷ್ಟು ದೊಡ್ಡ ಚೀಲವೇ ಇಡಬೇಕು! ಅಥವಾ ಒಂದಷ್ಟು ಚಿಕ್ಕ ಚಿಕ್ಕ ಚೀಲಗಳನ್ನಿಡಬೇಕು.

ನೀವೇನು ಮಾಡುತ್ತಿರುವಿರಿ ಹಂಚಿಕೊಳ್ಳುವಿರಾ?

Advertisements

8 thoughts on “ಇಂಗಾಲದ ಹೆಜ್ಜೆ ಗುರುತು

  1. ೧. ವಾರಕ್ಕೆರಡು ದಿನ ಮನೆಯಿಂದ ಕೆಲಸ ಮಾಡ್ತೀನಿ. ಗ್ಯಾಸ್ ಉಳಿಯೋದಷ್ಟೇ ಅಲ್ಲ, ಸಮಯ ಕೂಡಾ ಉಳಿಯತ್ತೆ. 🙂
    ೨. ವಿನಾಕಾರಣ ಕಾರಿನಲ್ಲಿ ಹೋಗೋದು ಕಡಿಮೆ ಮಾಡಿದೀನಿ. ಹೊರಗೆ ಹೋದಾಗ ಸಾಧ್ಯವಾದಷ್ಟೂ ಕೆಲಸಗಳನ್ನು ಒಂದೇ ಟ್ರಿಪ್ಪಿನಲ್ಲಿ ಮುಗಿಸುವ ಪ್ರಯತ್ನ ಮಾಡ್ತಿದೀನಿ. ಸೋಮಾರಿತನ ಕೂಡಾ ಇದಕ್ಕೆ ಒಂದು ಬಲವಾದ ಕಾರಣ 😉
    ೩. ಆಫೀಸೀನಿಂದ ಮನೆಗೆ ಬರುವಾಗಲೇ ತರಕಾರಿ ಇತ್ಯಾದಿಗಳನ್ನು ತಂದುಬಿಡೋದ್ರಿಂದ ಒಂದು ಟ್ರಿಪ್ ಉಳಿಯತ್ತೆ.

    ಈ ವರ್ಷ ನನ್ನ ಸೈಕಲ್ಲಿಗೆ ಸ್ವಲ್ಪ ಕೆಲಸ ಕೊಡುವ ವಿಚಾರ ಇದೆ, ನೋಡುವಾ! 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s