ಪದ-ಬಂಧ

ಹಳೆಯ ಲ್ಯಾಪ್-ಟಾಪಿನಲ್ಲಿ ಉಳಿದುಕೊಂಡಿದ್ದ ಫೋಟೊಗಳನ್ನು ರಿಕವರ್ ಮಾಡಿ ಸಿಡಿಯಲ್ಲಿ backup ಮಾಡಿ ಇಡುವಾಗ ಈ ಪದಬಂಧ ಸಿಕ್ತು. ಹೋದ ವರ್ಷ ನಮ್ಮ ಮಗ ಹುಟ್ಟಿದಾಗ ನನ್ನ ತಾತನಿಗೆ ಈ ಪದ-ಬಂಧ ಮಾಡಿ ಕಳಿಸಿದ್ದೆ.  ಸುಧಾದಲ್ಲಿ ಬರುತ್ತಿದ್ದ ಪದಬಂಧವನ್ನು ತಾತ ಸರ ಸರನೆ ತುಂಬಿಟ್ಟು ಬಿಡುತ್ತಿದ್ದರು. ಸಂಯುಕ್ತ ಕರ್ನಾಟಕದಲ್ಲಿ ಬರುವವನ್ನೂ ಹಾಗೇ. ಅವೇನಾದರೂ ಸ್ವಲ್ಪ ಬಿಗಿಯಾಗಿದ್ದವು ಬಂದರೆ ಅಡ್ಡ ಉದ್ದ ಸಾಲುಗಳನ್ನೂ ಅವುಗಳ ಹಿಂಟುಗಳನ್ನೂ ತಮ್ಮ ತಲೆಯಲ್ಲಿ ಇಟ್ಟುಕೊಂಡು  ವಾಕಿಂಗ್ ಮಾಡುವಾಗ ಅಥವಾ ಮತ್ತೆ ಇನ್ಯಾವದೋ ಕೆಲಸ ಮಾಡುವಾಗ ನೆನಪಿಟ್ಟುಕೊಂಡದ್ದನ್ನ ಮೆಲಕು ಹಾಕುತ್ತ,  ಹೊಳೆದ ಶಬ್ದಗಳಿಂದ ತಮ್ಮ ತಲೆಯಲ್ಲಿಯೇ ಜೋಡಿಸಿ ನಮಗೆ ‘ಇಕಾ ಇಷ್ಟನೇ ಅಡ್ಡ ಇಷ್ಟು ಅಕ್ಷರದ್ದು ಇಂಥ ಶಬ್ದ ಆದರೆ ಅದಕ್ಕೆ ಈ ಉದ್ದ ಸಾಲು ಸರಿ ಹೋಗುತ್ತದೆ’ ಎಂದು ಹೇಳುತ್ತಿದ್ದರೆ ನಮಗೆಲ್ಲ ಆಶ್ಚರ್ಯ! ಅಂಥ ತಾತನಿಗೆ ನಾನು ಇದನ್ನ ಕಳಿಸಿದ್ದೆ. ನಿಜವಾಗಿ ಇದು ಪದಬಂಧ ಅಲ್ಲ, ಒಂದು ರೀತಿಯಲ್ಲಿ ಪದಬಂಧ ಮತ್ತು ತಿರುವು-ಮುರುವು ಅಕ್ಷರಗಳಿಂದ ಸರಿಯಾದ ಶಬ್ದ ಹುಡುಕುವ ಆಟಗಳ hotchpotch. ಈಗ ಇಲ್ಲಿ upload ಮಾಡಿರುವೆ, ನೋಡಿ ಇರುವ ೫ರಲ್ಲಿ ನಿಮಗೆಷ್ಟು ಗೊತ್ತಾಗಬಹುದು.

( ಎರಡನೇದ್ದರ ಉತ್ತರ ಕೊಟ್ಟು ಬಿಡುತ್ತೇನೆ ಯಾಕೆಂದರೆ ನನ್ನ ತಾತ ಮಂತ್ರಾಲಯದಲ್ಲಿ ಇದ್ದದ್ದು ಬಹುಷಃ ೧೯೪೦ರ ಸುಮಾರು. ಆಗ ಅಲ್ಲಿ ಪೀಠಾಧಿಪತಿಗಳಾಗಿದ್ದವರ ಹೆಸರು ಗೊತ್ತಾಗುವ ಚಾನ್ಸಸ್ ಕಮ್ಮಿ ಅನಿಸುತ್ತದೆ.  ಆಗ ಮಂತ್ರಾಲಯದಲ್ಲಿ ಪೀಠದಲ್ಲಿದ್ದವರು ಶ್ರೀ ಸುಯಮೀಂದ್ರರು, ಉತ್ತರ ಸುಯಮೀಂದ್ರತೀರ್ಥ )

(ಕೊನೆಯದಾಗಿ : ಎಲ್ಲ ಶಬ್ದಗಳಿಂದ ಹೆಕ್ಕಿದ ಅಕ್ಷರಗಳನ್ನು ಜೋಡಿಸಿದಾಗ ಬರಬೇಕಾಗಿದ್ದು ೨ ಪದಗಳು, ಅದರಲ್ಲಿ ಮೊದಲನೇಯದ್ದು ೪ ಅಕ್ಷರದ್ದು, ಎರಡನೇದ್ದು ೩ ಅಕ್ಷರದ್ದು. ಕೆಳಗೆ ಚಿತ್ರದಲ್ಲಿ ಅದು ೭ ಅಕ್ಷರಗಳ ಒಂದು ಪದದಂತೆ ಕಾಣುತ್ತದಷ್ಟೆ )

pada-bandha-compress

Advertisements

4 thoughts on “ಪದ-ಬಂಧ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s