ಟ್ರಾಫಿಕ್

( ಹಳೆಯದೊಂದು ಕವನ: ಇತ್ತೀಚೆಗೆ ಅಲ್ಕೆಮಿಸ್ಟ್ ಓದುವಾಗ ನೆನಪಾದ ಈಶಾವಾಸ್ಯದ ಬಗ್ಗೆ ಬರೆದಿದ್ದೆ. ಅದೇ ಈಶಾವಾಸ್ಯ ಮೈಲುದ್ದದ ಟ್ರಾಫಿಕ್ಕಿನಲ್ಲಿ ಸಿಕ್ಕಿ ಹಾಕಿಕೊಂಡಾಗ ನೆನಪಾದಾಗ ಹೀಗನಿಸಿತ್ತು)

ಮೈಲುದ್ದ ನಿಂತ ಕಾರುಗಳ ಮಧ್ಯೆ
ನಿಂತು ನಿಂತು ಇಂಚಿಂಚೆ ಮುಂದೆ ಸರಿವ
ಟ್ರಾಫಿಕ್ಕಿನಲ್ಲಿ ಸಿಲುಕಿದ್ದಾಗ ನೆನಪಾದದ್ದು
‘ತದೇಜತಿ ತನ್ನೇಜತಿ’ 

ಖಾಲಿ ರಸ್ತೆಯಲ್ಲಿ ೬೫ರ ವೇಗದಲ್ಲಿ
ಹತ್ತೇನಿಮಿಷಗಳಲ್ಲಿ ತಲುಪುವ ಮನೆ
ಬಲು ದೂರ ಎನಿಸಿದಾಗ ನೆನಪಾದದ್ದು
‘ತದ್ದೂರೇ ತದ್ವಂತಿಕೆ’ 

ಎರಡು ಒಂದು ಎರಡು; ಅಪರೂಪಕ್ಕೊಮ್ಮೊಮ್ಮೆ
ಮೂರು ಎಂದು ಸತತ ಬದಲಿಸುತ್ತ ಗೇರು
ಕೊನೆಗೊಮ್ಮೆ ಎಕ್ಸಿಟ್ಟಿಗಿಳಿದಾಗ ಅನಿಸಿದ್ದು
‘ಕೃತೋ ಸ್ಮರ ಕೃತಂ ಸ್ಮರ’

ಟಿಪ್ಪಣಿ:
  ಈಶಾವಾಸ್ಯದ ಋಷಿ  ಬ್ರಹ್ಮ ಎಂಥದ್ದು ಎಂದು ಹೇಳುತ್ತ ಅದು ಚಲಿಸ್ತದೆ-ಚಲಿಸೋದಿಲ್ಲ (ತದೇಜತಿ-ತನ್ನೇಜತಿ), ಅದು  ದೂರವಿದೆ-ಹತ್ತಿರವಿದೆ (ತದ್ದೂರೆ-ತದ್ವಂತಿಕೆ), ಎಲ್ಲದರ ಒಳಗಿದೆ-ಎಲ್ಲದರ ಹೊರಗಿದೆ  ಎಂದು ವೈರುಧ್ಯಗಳ ಪಟ್ಟಿ ಕೊಡುತ್ತಾನೆ. ಕೊನೆಯಲ್ಲಿ ಆ ಬ್ರಹ್ಮನನ್ನು ಪ್ರಾರ್ಥಿಸುತ್ತಾ ಮಾಡಿದ್ದನ್ನು ನೆನಪಿಡು-ಮಾಡಿದವನನ್ನು ನೆನಪಿಡು (ಕೃತೋ ಸ್ಮರ-ಕೃತಂ ಸ್ಮರ) ಎಂದು ಕೇಳಿಕೊಳ್ಳುತ್ತಾನೆ.  ಈ ಕವನಕ್ಕೂ ಈಶಾವಾಸ್ಯಕ್ಕೂ ಏನೂ ಸಂಬಂಧ ಇಲ್ಲ, ಅದರ ತುಣುಕುಗಳು ಸಂದರ್ಭಕ್ಕೆ ಹೊಂದಿದ್ದವು ಅನಿಸಿತ್ತು ಅಷ್ಟೇ!
 

Advertisements

6 thoughts on “ಟ್ರಾಫಿಕ್

 1. ಸಂಸ್ಕೃತಕ್ಕೆ ಕೆಳಗೆ ಟಿಪ್ಪಣೆ ಕೊಟ್ಟು ಅರ್ಥ ವಿವರಿಸಿದ್ದರೆ ಕವನ ಅರ್ಥವಾಗುತ್ತಿತ್ತು. ನನಗೆ ಸ್ವಲ್ಪ ಸಂಸ್ಕೃತ ಬರುತ್ತದ್ದಾದರೂ ಉಪನಿಷತ್ತಿನ ಗೂಢ ಭಾಷೆ ಅರ್ಥವಾಗುವುದಿಲ್ಲ. ದಯವಿಟ್ಟು ವಿವರಿಸುತ್ತೀರಾ?
  – ಕೇಶವ

  • ಕೇಶವರೆ,
   ನನ್ನ ಸಂಸ್ಕೃತ ಅಷ್ಟಕ್ಕಷ್ಟೆ. ಈಶಾವಾಸ್ಯದ ಮೇಲೆ ಸ್ವಲ್ಪ ವರ್ಷಗಳ ಕೆಳಗೆ ಆಸಕ್ತಿ ಹುಟ್ಟಿದಾಗ ಅರ್ಥ ಓದಿದ್ದೆ. ಈಗ ಟಿಪ್ಪಣಿ ಬರೆದಿದ್ದೇನೆ ನೋಡಿ.

   ಅನಿಲ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s