ಥ್ಯಾಂಕ್ಸ್ ಕೆಂಡಸಂಪಿಗೆ…

ಮೊನ್ನೆ ನನ್ನ office ಕಿಟಕಿಯಿಂದ ಕಂಡ ಕಾಮನಬಿಲ್ಲನ್ನು ಇಲ್ಲಿ ಹಾಕಿದ್ದು ಕೆಂಡಸಂಪಿಗೆಯಲ್ಲೂ ಪ್ರತಿಫಲಿಸಿತ್ತು. ನನ್ನ ಹೊಸ ಬ್ಲಾಗನ್ನು ದಿನದ ಬ್ಲಾಗಿನಲ್ಲಿ ಪರಿಚಯಿಸಿದ ಕೆಂಡಸಂಪಿಗೆಗೂ, ದಿನದ ಬ್ಲಾಗಿನ ಜಿತೇಂದ್ರ ಅವರಿಗೆ ಥ್ಯಾಂಕ್ಸ್.

ಕೆಂಡಸಂಪಿಗೆಯಲ್ಲಿ ಕಂಡದ್ದು ಹೀಗೆ,

ಆಫೀಸಿನ್ಯಾಗ ನಾಲ್ಕನೇ ಅಂತಸ್ತಿನ ಮ್ಯಾಲಿಂದ ಕಂಡ ಕಾಮನಬಿಲ್ಲಿನ ವರ್ಣನೆಯಲ್ಲಿದ್ದಾರೆ ಪ್ರತಿಬಿಂಬ ಬ್ಲಾಗಿನ ಅನಿಲ್. ಹಿಂಗೆ ಆಫೀಸಿನ ಕಿಟಕಿಯಿಂದ ದೂರದ ಬೆಟ್ಟ ನೋಡುತ್ತಿದ್ದವರು ಅಲ್ಲಿದ್ದ ಮಂಜು ಕಂಡು ಖುಷಿಗೊಂಡಿದ್ದಾರೆ. ಆಮೇಲೆ ಮಂಜು ಮಾಯವಾಗಿ, ಜಿಟಿ ಜಿಟಿ ಮಳೆ ಹತ್ತಿ ಅದರಾಗೊಂಚೂರು ಬಿಸಿಲು ಬಂದು ದೊಡ್ಡ ಕಾಮನಬಿಲ್ಲು ಅಲ್ಲೇ ಇಳಿದಂಗೆ ಕಾಣಿಸಿಕೊಂಡಂತಾಗಿ ಅಚ್ಚರಿಗೊಂಡು, ಅದನ್ನೆಲ್ಲ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದು ಪ್ರತಿಬಿಂಬಕ್ಕೆ ತಂದಿದ್ದಾರೆ.
” ಇದಕ್ಕೂ ಮುಂಚೆ ಒಂದಲ್ಲ ಎರಡು ಬ್ಲಾಗುಗಳನ್ನು ತೆರೆದೆ. ಬರೆದದ್ದಕ್ಕಿಂತ ಮನಸ್ಸಿನಲ್ಲಿ ಗುಣಿಸಿದ್ದೇ ಹೆಚ್ಚಾಯ್ತು. ಕೊನೆಗೆ ಅವು ಅಂತರಿಕ್ಷದಲ್ಲಿನ ಇಂಧನ ಮುಗಿದ ಉಪಗ್ರಹಗಳಂತೆ space junk ಆಗಿ ಉಳಿದಿವೆ. ಮತ್ತೆ ಅವುಗಳಲ್ಲೇ ಬರೆಯಬೇಕು ಅನಿಸುತ್ತಿಲ್ಲ” ಅನ್ನುವ ಬ್ಲಾಗಿಗ ಅನಿಲ್, “ಅಲ್ಲಿಲ್ಲಿ ನೋಡಿದ್ದು, ಹೊಸತಾಗಿ ಓದಿದ್ದು, ಅಥವಾ ಸುಮ್ಮನೆ ಹಾಳು ಹರಟೆ, ಏನನ್ನಾದರೂ ಆಗಲಿ ನಿಯಮಿತವಾಗಿ ಬರೆಯುವ ಉಮೇದಿನೊಂದಿಗೆ ಈ ಬ್ಲಾಗ್ ಆರಂಭಿಸಿದ್ದಾರೆ. ಅವರ ಈ ಹೊಸ ಬ್ಲಾಗ್ ಈಗಷ್ಟೇ ಚಿಗಿತುಕೊಳ್ಳುತ್ತಿದೆ. ಇದಾದರೂ ಅವರ ಬರೆಯುವ ಉತ್ಸಾಹಕ್ಕೆ ಸ್ಪಂದಿಸಲಿ ಅನ್ನುವ ಹಾರೈಕೆ ನಮ್ಮದು. ಇವತ್ತಿನ ಓದಿಗೆ ಈ ಪ್ರತಿಬಿಂಬ.
 

 

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s