ಅಲ್ಲಿದೆ ನಮ್ಮ ಮನೆ

ಇವತ್ತು (ಜನೆವರಿ ೨೫) ಪುಷ್ಯ ಮಾಸದ ಅಮವಾಸ್ಯೆ, ಪುರಂದರ ದಾಸರ ಪುಣ್ಯದಿನ. ‘ಪುರಂದರ ಗುರುಂ ವಂದೆ ದಾಸಶ್ರೇಷ್ಠಂ ದಯಾನಿಧಿಂ’. ನವಕೋಟಿ ನಾರಾಯಣ ಕ್ಷಣ ಮಾತ್ರದಲ್ಲಿ ಎಲ್ಲವನ್ನೂ ತ್ಯಾಗ ಮಾಡಿ ದಂಡಿಗೆ ಬೆತ್ತ ಹಿಡಿದು ಹೊರಡುವ ಕಥೆಯೆ ರೋಮಾಂಚಕ. ಅದೆಂಥ ಕ್ಷಣವಿದ್ದೀತು! ಶ್ರೀನಿವಾಸ ನಾಯಕರ ಉದ್ಧಾರದ ಕ್ಷಣ, ಕರ್ನಾಟಕ ಸಂಗೀತದ ಹೊಸ ಹುರುಪಿನ ಕ್ಷಣವೂ ಅದೇ ಅಲ್ಲವೆ? ಬೆಲೆ ಬಾಳುವ ರತ್ನಗಳ ವ್ಯಾಪರಿಯ ಜಿಪುಣತನದ ಪರದೆ ಹರಿದು ಬೆಲೆ ಕಟ್ಟಲಾಗದ ರತ್ನ ಬೇಕೆನಿಸಿದ ಕ್ಷಣ ನಿಜಕ್ಕೂ ಧನ್ಯ.  

ದಾಸರ ಪದಗಳನ್ನೇ ಬಳಸಿಕೊಂಡ  ಸು.ರಂ.ಎಕ್ಕುಂಡಿಯವರ ಈ ಪದ್ಯ ಬಹಳ ಇಷ್ಟವಾಗಿದೆ ನನಗೆ. ಪುರಂದರ ದಾಸರ ಸ್ಮರಣೆಯ ದಿವಸ ಅದರ ಕೆಲ ನುಡಿಗಳು… (ಬೆಳ್ಳಕ್ಕಿ ಹಿಂಡು ಪುಸ್ತಕದಿಂದ)

ಅಲ್ಲಿದೆ ನಮ್ಮ ಮನೆ

‘ಬಂದಿರಾ ಭಾಗವತರೆ ಒಳಗೆ ಬನ್ನಿರಿ
ಮಕ್ಕಳೇ ನೀರು ಕೊಡಿ ಅವರಿಗಿಷ್ಟು
ಎಷ್ಟು ದಣಿವಾಯಿತೊ ನಿಮಗಿಲ್ಲಿ ಬರು
ವಾಗ. ದಾರಿಯಲಿ ಕಣಿವೆಯಲಿ ಕಷ್ಟ
ಪಟ್ಟು.

ಮಧ್ವಪತಿ ಇಲ್ಲಿ ಬಾ. ಅದ್ಭುತವ ಕಂಡೆ
ಯಾ ? ವಜ್ರರೇಖೆಗಳಿವೇ ಮನೆಯ
ತುಂಬ. ಗೆಜ್ಜೆ ಧ್ವನಿ ಕೇಳುತಿದೆ. ಒಳ
ಗೆಲ್ಲ ಚೆಲ್ಲಿದೆ. ಯಾರಯ್ಯ ಒಡೆದವರು
ಹಾಲುಕುಂಭ?’

ಕಿರುಬೆರಳಿನಿಂದ ಗಿರಿಯೆತ್ತಿದವ. ಕ
ಟಿಯಲ್ಲಿ ಕರವಿಟ್ಟು ನಿಂತಿರಲು ಬೆ
ಣ್ಣೆ ಮೆಲುತ. ಕರೆಯ ಕೇಳುತ ಪು
ರಂದರ ದಾಸರೆಂದರು, ‘ಆರತಿಯನೆ
ತ್ತಿರಿ ರಂಗ’ ಗೆನುತ.

….

ಲಕ್ಷ್ಮಣ … ಸಂಸಾರದಲ್ಲಿ ಹ್ಯಾಂಗಿರಬೇ
ಕು. ಅಚ್ಯುತ … ಅಂಗಳದ ಹಕ್ಕಿಯಂ
ತೆ. ಹೇಬಣ … ಭುರ್ರೆಂದು ಮನೆಕ
ಟ್ಟಿ ಆಡಿದ್ದೆ. ಆಟ ಸಾಕಿನ್ನೆಂದ ಮಕ್ಕಳಂ
ತೆ…

ತಂಬೂರಿಯೆತ್ತಿರಿ ತಾಳಗಳ ಬಾಜಿ
ಸಿರಿ. ಅಂಬಿಗನು ಹರಿಗೋಲು ತಂದ
ನಲ್ಲ. ವಸ್ತಿಕಾರನಿಗೆ ಬೆಳಗಾಯಿತೆ
ವಿಠ್ಠಲ. ಭಾಗವತರೂ ಇಲ್ಲಿ ಬಂದ
ರಲ್ಲ

ಅಲ್ಲಿದೆ ನಮ್ಮನೆ … ಇಲ್ಲಿಹುದು ಸು
ಮ್ಮನೆ. ಎಲ್ಲೆಲ್ಲು ಇರುವದು ಅವನ
ಮನೆಯು. ಇಲ್ಲೆಲ್ಲೊ ಅಂಬಿಗನ ಸೊಲ್ಲು
ಕೇಳುತಿದೆ ಫುಲ್ಲನಾಭದಲ್ಲವೇ
ನೊ ಧ್ವನಿಯು

….

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s