ಎಳ್ಳು-ಬೆಲ್ಲ, ಒಳ್ಳೊಳ್ಳೆ ಮಾತು…

ಹೊರಗರಳಿದ ಹೂಗಳಿರದೆ
ಮರವು ಬಳ್ಳಿ ಬರಿದು ಬರಿದೆ;
ಕಂಡರೇನು ಹಾಳು !…
ಅರಳಿದೆ ಒಳಗೆಲ್ಲರೆದೆ —
ಸಂಕ್ರಾಂತಿಯ ಸೊಗಸು ಇದೇ
ಇದರೊಳೆ ಇದೆ ಬಾಳು —
ದೈವದ ದಯೆ ಕೇಳು !

ಸಂಕ್ರಮಣದ ಪುಣ್ಯಕಾಲ
ಸಲಿಸಿದೆ ನಮಗೆಳ್ಳು-ಬೆಲ್ಲ,
ಏನಿದೇನು ಮಾಟ ?
ಎದೆಯ ನೇಹಕೆಳ್ಳು ಗುರುತು,
ಮಿದುಸೊಲ್ಲಿಗೆ ಬೆಲ್ಲವಾಯ್ತು ;
ಇದೇ ಸುಖದ ಕೂಟ —
ಹಬ್ಬದ ಸವಿಯೂಟ !

ಹಿಮರಾಜನ ಹಿಂದಕೊತ್ತಿ
ಶಿಶಿರಋಷಿಯ ಗುಡಿಯನೆತ್ತಿ
ರವಿ ನಡೆಸಿದ ಸ್ಯಂದನ —
ಭೋಗರಾಗ ಸರಿದೆ ಹೋಯ್ತು,
ಮಾಗುವರಿವ ಕರೆದು ತಂತು,
ಸಂಕ್ರಾಂತಿಯ ಶುಭದಿನ —
ಸಂಕ್ರಮಣದ ಶಿವದಿನ !

ಆನಂದಕಂದರ ‘ಸಂಕ್ರಮಣದ ಶಿವದಿನ’ ಎಂಬ ಕವನದ ಈ ಸಾಲುಗಳು ಬಹಳ ಹಿಡಿಸಿದವು.  ಎಲ್ಲರಿಗೂ ಸಂಕ್ರಮಣದ ಶುಭಾಶಯಗಳು. ಈಗ ಎಲ್ಲರೆದೆಯೊಳಗೆ ಅರಳಿದ್ದು ಹೂಗಳಿಗೆ, ಹಸಿರೆಲೆ ತುಂಬಿದ ಮರಗಳಿಗೆ ಎಲ್ಲಕ್ಕೂ ಹೆಚ್ಚಾಗಿ ಮಾಗುವ ಅರಿವಿಗೆ ನಾಂದಿಯಾಗಲಿ; ಹಾಗೇ ಸ್ಯಾನ್ ಹೋಸೆ ಚಳಿಯಲ್ಲಿ, ಬಿಸಿಲೇ ಬೀಳದ ನಮ್ಮ ಅಪಾರ್ಟ್ಮೆಂಟಿನಲ್ಲಿ ಒಣಗುತ್ತಿರುವ ತುಳಸಿ ಸಸಿ ಮತ್ತೆ ಹಸಿರು ತುಂಬಲಿ ಎನ್ನುವ ಆಶಯದೊಂದಿಗೆ 🙂

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s