ಗರುಡಗಂಬದಲಿ ಕುಣಿದು ಹಾಡಿದರು ನೀವು ಬರುವಿರೆಂದು

ಗರುಡಗಂಬದಲಿ ಕುಣಿದು ಹಾಡಿದರು ನೀವು ಬರುವಿರೆಂದು ಶ್ರೀ ವಿಷ್ಣುತತ್ವಸುಧೆ ಸ್ವರ್ಣ ಕಲಶದಲಿ ತುಂಬಿ ತರುವಿರೆಂದು ಕಡಲ ಹಾರಿ ಪರ್ವತವ ತೂರಿ ದಾನವರ ಕುಲವ ಹುರಿದು ಶ್ರೀರಾಮಚಂದ್ರ ಶುಭನಾಮ ವಚನ ಮೈಥಿಲಿ ಮಾತೆಗೊರೆದು ಬಂದನಂಜನಾನಂದತೀರ್ಥ ಪವಮಾನ ದೀನ ಬಂಧು ಗರುಡಗಂಬದಲಿ ಕುಣಿದು ಹಾಡಿದರು ನೀವು ಬರುವಿರೆಂದು ಸೋಮ ವಂಶದೊಳಗುದಿಸಿ ಬಂದ ಶ್ರೀ ಭೀಮಸೇನನೆಂದು ಬಕ ಹಿಡಿಂಬ ಕಿಮ್ಮೀರ ಕೀಚಕರನೆಲ್ಲ ಸವರಿ ಕೊಂದು ಶ್ರೀಮುಕುಂದ ಗೋವಿಂದ ಭಕ್ತ ಪವಮಾನ ದೀನ ಬಂಧು ಗರುಡಗಂಬದಲಿ ಕುಣಿದು ಹಾಡಿದರು ನೀವು ಬರುವಿರೆಂದು ಕೌಲ … ಓದನ್ನು ಮುಂದುವರೆಸಿ

Rate this:

ನಮನ

  ಅಮ್ಮ ತಾಯಿ ಆಯಿ ಅವ್ವ ಜನ್ಮದಾತ್ರಿ ಜನನಿ ಮಾತೆ ನಿಮ್ಮ ಪ್ರೀತಿ ಹೊನಲಿನಲ್ಲಿ ನಮ್ಮ ಬಾಳು ಹಸನು ಮಾಡಿ   ಅಪ್ಪನೊಡನೆ ಕಂಡ ಕನಸ ಒಪ್ಪವಾಗಿ ನನಸಗೊಳಿಸೆ ಅಮ್ಮ ನೀವು ಹಗಲು ಇರುಳು ನಿಮ್ಮ ನೀವು ತೇಯ್ದುಕೊಂಡು   ಗಟ್ಟಿ ಮನದಿ ಕಷ್ಟ ಮೆಟ್ಟಿ ದಿಟ್ಟ ತನದ ಬಟ್ಟೆ ತೋರಿ ಕೆಟ್ಟ ಕಣ್ಣು ತಾಗದಂತೆ ದಿಟ್ಟಿ ಬೊಟ್ಟಿನಂತೆ ಕಾದು   ಬಾಳು ಬೆಳೆಸಿದವ್ವ, ಮೇಲ್ಮೆ ತಿಳಿಸಿದವ್ವ, ತಾಳ್ಮೆಯಿಂದ ಬೇಳ್ವೆ ನಡೆಸಿ, ಹರಿಯ ಗುರುವ ಒಲಿಸಿಕೊಂಬ ಹಾದಿ … ಓದನ್ನು ಮುಂದುವರೆಸಿ

Rate this:

ಹೆಂಡ್ತೀ ಹೆಂಡ್ತೀ ಏನ ಕೊಡ್ತೀ?

ಹೆಂಡ್ತೀ ಹೆಂಡ್ತೀ ಏನ ಕೊಡ್ತೀ? ಮುಂಜಾನ್ ಮುಂಜಾನ್ ಲಗೂ ಎದ್ದು ಸಾನ ಸಂಧ್ಯಾನ್ ಎಲ್ಲಾ ಮುಗ್ಸಿ ಧೊಡ್ಡವ್ನ್ ಎಬ್ಸಿ ರೆಡಿ ಮಾಡ್ಸಿ ಸಾಲಿಗ್ ಸಾಗ್ಸಿ ಸಣ್ಣವ್ನ್ ಡೈಪರ ಬದ್ಲಿ ಮಾಡ್ಸಿ ಮಾರಿ ತೊಳ್ಸಿ ಬಂದೀನ್ ನೋಡ ನಿಂತೀನ್ ನೋಡ ಕುಡದಿದ್ ಛಾ ಖಾಲಿ ಆತ ಹೊಟ್ಯಾಗ್ ತಾಳ ಚಾಲೂ ಆತ ಭಡಾನ್ ಕೊಡ ಗಡಾನ್ ಕೊಡ ದ್ವಾಸಿ ಇಡ್ಲಿ ರಾಗಿ ಓಟ್ಸು ಏನರೆ ಭಾಳಷ್ಟ್ ಕೆಲ್ಸಾ ಮಾಡೋದದ ಹೇಳಿದ್ ಕೇಳ್ತೀನ್ ಹಾಕಿದ್ ತಿಂತೀನ್ ಹೆಂಡ್ತೀ ಹೆಂಡ್ತೀ ಏನ ಕೊಡ್ತೀ? … ಓದನ್ನು ಮುಂದುವರೆಸಿ

Rate this:

ಮಸುಕು ಬೆಟ್ಟದ ದಾರಿ

ಮಸುಕು ಬೆಟ್ಟದ ದಾರಿ ಓದಿ ಮುಗಿಸಿದೆ. ಎಮ್. ಆರ್. ದತ್ತಾತ್ರಿ ಅವರ ಎರಡನೇ ಕಾದಂಬರಿ. ಮನೋಹರ ಗ್ರಂಥಮಾಲೆಯವರು ಪ್ರಕಟಿಸಿದ್ದಾರೆ. ಆಕಸ್ಮಿಕವಾಗಿ, ಕುಪರ್ಟಿನೋ ಲೈಬ್ರರಿಯಲ್ಲಿ ಸಿಕ್ಕಿತು, ಲೈಬ್ರರಿಯ ದಪ್ಪ ರಟ್ಟಿನ ಪ್ರತಿ. ಹೊಸ ತರಹದ ಪಾತ್ರವಿದೆ ಇದರಲ್ಲಿ, ನೆನಪಿನ ಮೂರ್ತ ರೂಪ. ಕಾದಂಬರಿಯ ತುಂಬ ಕಾಣುವದು ಸೂಕ್ಷ್ಮ ಅವಲೋಕನ, details, details, details! ಕವಿ ಸಂವೇದನೆಯ ಸೂಕ್ಷ್ಮ ದೃಷ್ಟಿ ಹಾಗೂ ವಿವರಗಳು ‘ದ್ವೀಪವ ಬಯಸಿ’ಯಲ್ಲಿಯೂ ಇದ್ದವು; ಇಲ್ಲಿ ಅವುಗಳದ್ದೇ ಮೆರವಣಿಗೆ. ಸನ್ನಿವೇಶಗಳನ್ನು ಅವುಗಳ ಎಲ್ಲ ಬಣ್ಣ ರುಚಿ ವಾಸನೆಗಳ ಸಮೇತ … ಓದನ್ನು ಮುಂದುವರೆಸಿ

Rate this:

ಪ್ರೀತಿ ಮೃತ್ಯು ಭಯ…

ಮೊನ್ನೆ ಕುಪರ್ಟಿನೊ ಲೈಬ್ರರಿಯಲ್ಲಿ ಅನಂತಮೂರ್ತಿಯವರ ಪ್ರೀತಿ ಮೃತ್ಯು ಭಯ ಸಿಕ್ಕಿತ್ತು. ಚಿಕ್ಕ ಪುಸ್ತಕ, ಕೆಲವೇ ಸಮಯದಲ್ಲಿ ಓದಿ ಮುಗಿಯಿತು. ಆರಂಭದ ಕೆಲವು ಪುಟಗಳನ್ನು ಓದುವದು ಸ್ವಲ್ಪ ಕಷ್ಟವಾಯಿತು. ಮುಂದೆ ಹೋಗುತ್ತ ಸರಳವಾಗಿ ಓದಲು ಆಯಿತು. ಅನುಬಂಧದಲ್ಲಿ ಕೊಟ್ಟ ಕಾದಂಬರಿ ಮರು ಬರೆಹವನ್ನು ಓದಲಿಲ್ಲ. ಪುಸ್ತಕ ಓದಿ ೨ ದಿನಗಳ ನಂತರ ಅದರ ಬಗ್ಗೆ ನೆನಪು ಮಾಡಿಕೊಂಡರೆ ಅನಿಸಿದ್ದು ಇಲ್ಲಿ ಕೆಳಗಿದೆ. ತೀರ ವೈಯಕ್ತಿಕವೆನಿಸುವ ಬರಹ. ಮನಸ್ಸಿನ ಭಾವನೆಗಳು ದಟ್ಟವಾಗಿ, ಹಸಿಬಿಸಿಯಾಗಿ ಹಾಗೇ ಹೊರಬಂದತಿವೆ. ಅದಕ್ಕೊಂದು ಹೆಸರು, ಪ್ರಜ್ಞಾ ಪ್ರವಾಹ ತಂತ್ರ ( … ಓದನ್ನು ಮುಂದುವರೆಸಿ

Rate this: